ಬೆಂಗಳೂರು: ಬದುಕಿನ ಹೆಜ್ಜೆ ಸರಿಯಾಗಿರಬೇಕು ಎಂದರೆ ಧರ್ಮದ ಮಾರ್ಗದಲ್ಲಿ ನಡೆಯಬೇಕಾಗಿದೆ. ನಾವುಗಳು ಭೂಮಿಯ ಮೇಲೆ ಪಡುವ ಕಷ್ಟ ಕ್ಷಣಿಕ, ಮೋಕ್ಷದ ನಂತರ ಪಡೆಯುವ ಸುಖ ಶಾಶ್ವತವಾಗಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ನುಡಿ ದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ೫೦ನೇ ವರ್ಷದ ಸುವರ್ಣ ಸಂಭ್ರಮ ಸಮ್ಮೇಳನ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸನಾತನ ಧರ್ಮದ ರಕ್ಷಣೆ ಕೇವಲ ಒಂದೇ ಧರ್ಮಕ್ಕೆ ಅಲ್ಲ, ಎಲ್ಲ ಹಿಂದೂ ಧರ್ಮದವರಿಂದ ಆಗಬೇಕು. ನಮ್ಮಲ್ಲಿ ಜಾತಿಗಳ ಕೋಟೆ ಇದೆ. ಆದರೆ, ಒಂದಕ್ಕೊಂದು ವಿರೋಧವಿಲ್ಲ. ಎಲ್ಲರ ಉದ್ದೇಶ ಕೋಟೆಯ ಒಳಗಿನ ಗರ್ಭಗುಡಿಯ ರಕ್ಷಣೆಯಾಗಿದೆ. ಅದರಂತೆ ಭಾರತ, ನಮ್ಮ ಸಂಸ್ಕೃತಿಯ ರಕ್ಷಣೆಗಾಗಿ ಎಲ್ಲರ ಒಗ್ಗಟ್ಟು ಅಷ್ಟೇ ಮುಖ್ಯವಾಗಿದೆ ಎಂದು ಶ್ರೀಗಳು ಹೇಳಿದರು.