ಉಪಚುನಾವಣೆ ಸೋಲಿಗೆ ಯತ್ನಾಳ್ ಹರಕುಬಾಯಿ ಕಾರಣ

0
37
ರೇಣುಕಾಚಾರ್ಯ

ದಾವಣಗೆರೆ: ಯತ್ನಾಳ್ ಹರಕುಬಾಯಿಯಿಂದಲೇ ನಾವು ಉಪಚುನಾವಣೆ ಸೋತೆವು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಹೇಳುವ ಸಂಸದ ಯತ್ನಾಳ್ ಅವರು ತಮ್ಮ ತಂಡದೊಂದಿಗೆ ಶಿಗ್ಗಾವಿಯಲ್ಲಿ ಠಿಕಾಣಿ ಹೂಡಿದ್ದರು. ಹಾಗಿದ್ದರೂ ಕೂಡ ಶಿಗ್ಗಾವಿಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ಯಾಕೆ ಎಂಬುದನ್ನು ಅವರೇ ತಿಳಿಸಬೇಕು ಎಂದರು.
ಯತ್ನಾಳ್ ಹರಕುಬಾಯಿಯಿಂದಲೇ ನಾವು ಹಿಂದೆ 2023ರ ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಂಡಿದ್ದೆವು. ಈಗ ನಡೆದ ಮೂರು ಉಪ ಚುನಾವಣೆಯಲ್ಲೂ ಸೋಲು ಕಾಣಲು ಯತ್ನಾಳ್ ಹರಕುಬಾಯಿಯೇ ಕಾರಣ ಎಂದು ಆರೋಪಿಸಿದರು.

Previous articleದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ
Next article27 ಕೋಟಿಗೆ ಲಕ್ನೋ ಪಾಲಾದ ಪಂತ್