ಉಡುಪಿಗೆ ಬಾಬಾ ರಾಮದೇವ್

0
23

ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಗುರುವಾರದಿಂದ ನಡೆಯಲಿರುವ ಮೂರು ದಿನಗಳ ಪ್ರಾಚ್ಯವಿದ್ಯಾ ಸಮ್ಮೇಳನದ ಉದ್ಘಾಟನೆಗೆ ಪರ್ಯಾಯ ಪುತ್ತಿಗೆ ಪೀಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಪತಂಜಲಿ ಯೋಗ ಗುರು ಬಾಬಾ ರಾಮದೇವ್ ಆಗಮಿಸಿದರು.
ಬಾಬಾ ರಾಮದೇವ್ ಹಾಗೂ ಗಣ್ಯರಾದ ಬಾಲಕೃಷ್ಣ ಆಚಾರ್ಯ, ಮಾತಾ ಸಾಧ್ವಿ ದೇವಪ್ರಿಯಾ ದೀದೀಜಿ ಮೊದಲಾದವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ಯೋಗ ಮಾತೆಯರು ಆರತಿ ಬೆಳಗಿದರು. ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಉದ್ಯಮಿ ಸಂತೋಷ ಶೆಟ್ಟಿ ತಂಕರಗುತ್ತು, ರಾಘವೇಂದ್ರ ಭಟ್ ಮೊದಲಾದವರಿದ್ದರು.
ಪ್ರತಿದಿನ ಕೃಷ್ಣಮಠ ರಾಜಾಂಗಣದಲ್ಲಿ ಪತಂಜಲಿ ಯೋಗ ಶಿಬಿರ ನಡೆಯಲಿದೆ.

Previous articleಮಾತೃಪಕ್ಷಕ್ಕೆ ಬಂದ ಸಿಪಿವೈ ಅಭ್ಯರ್ಥಿಯಾದರೆ ಇನ್ನೂ ಸಂತೋಷ
Next articleಬಿಜೆಪಿ ಹಿಂದುತ್ವ ಮರೆತಿದ್ದಕ್ಕೆ ವಿಪಕ್ಷದ ಸ್ಥಾನದಲ್ಲಿ