ಇಂಗ್ಲೆಂಡಿನ ದೊರೆ ೩ನೇ ಚಾರ್ಲ್ಸ್‌ಗೆ ಕ್ಯಾನ್ಸರ್

0
26

ಲಂಡನ್: ಇಂಗ್ಲೆಂಡಿನ ದೊರೆ ಮೂರನೇ ಚಾರ್ಲ್ಸ್ ಅವರಿಗೆ ಕ್ಯಾನ್ಸರ್ ರೋಗ ಬಾಧಿಸಿದೆ ಎಂದು ಬಕಿಂಗ್‌ಹ್ಯಾಮ್ ಅರಮನೆ ಪ್ರಕಟಿಸಿದೆ. ಆದರೆ ಯಾವ ರೀತಿಯ ಕ್ಯಾನ್ಸರ್ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಮಾಹಿತಿ ನೀಡಿಲ್ಲ. ಚಿಕಿತ್ಸೆಯ ಅವಧಿಯಲ್ಲಿ ಅವರು ಸರ್ಕಾರದ ಕಾರ್ಯವ್ಯವಹಾರ ಹಾಗೂ ದಾಖಲೆ ಪತ್ರಗಳ ಪರಿಶೀಲನೆಯನ್ನು ಎಂದಿನಂತೆ ನಡೆಸುವರೆಂದು ಅರಮನೆ ತಿಳಿಸಿದೆ. ಈ ನಡುವೆ ಇಂಗ್ಲೆಂಡಿನ ದೊರೆ ಶೀಘ್ರ ಗುಣಮುಖವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ದೊರೆ ಸೋಮವಾರ ಎಂದಿನಂತೆ ನಿಯಮಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕುವಂತೆ ವೈದ್ಯರು ಸಲಹೆ ನೀಡಿದ್ದರು. ಈ ವಿಚಾರದಲ್ಲಿ ವದಂತಿ ಹಬ್ಬುವುದನ್ನು ತಪ್ಪಿಸಲು ದೊರೆ ವಾಸ್ತವ ಸಂಗತಿಯನ್ನು ಜಗತ್ತಿನ ಮುಂದಿಡಲು ಅಪೇಕ್ಷಿಸಿದರೆಂದು ಅರಮನೆ ವಿವರಿಸಿದೆ. ಈಗಾಗಲೇ ತಮ್ಮ ಮಕ್ಕಳು ಹಾಗೂ ಸಂಬಂಧಿಗಳಿಗೆ ಈ ಬಗ್ಗೆ ದೊರೆ ಮಾಹಿತಿ ನೀಡಿದ್ದಾರೆ.

Previous articleಕೇಂದ್ರ ವಿರುದ್ಧ ಇಂದು ದೆಹಲಿಯಲ್ಲಿ ಪ್ರತಿಭಟನೆ
Next articleಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿ: ದೇವೇಗೌಡರ ಮನವಿ