ಆರೋಗ್ಯ ಏರುಪೇರು: ವಿದ್ಯಾರ್ಥಿ ಸಾವು

0
34

ಚಿಕ್ಕೋಡಿ: ಪಟ್ಟಣದ ಸಿಟಿಇ ಸಂಸ್ಥೆ ಇಂಟರ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ವಾಂತಿ ಬೇಧಿಯಿಂದ ಗುರುವಾರ ಮೃತಪಟ್ಟ ಘಟನೆ ನಡೆದಿದೆ.
ಅನಂತಮೂರ್ತಿ ವಿಠ್ಠಲ ಬಡಾಯಿ(೧೩) ಮೃತಪಟ್ಟ ವಿದ್ಯಾರ್ಥಿ ಎಂದು ಅವರ ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿ ಮೂಲತಃ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದವನಾಗಿದ್ದಾನೆ. ಬುಧವಾರದವರಿಗೆ ಇತ ಎಲ್ಲಾ ತರಗತಿಗಳಿಗೆ ಹಾಜರಾಗಿದ್ದಾನೆ. ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಸಾಕಷ್ಟು ತೊಂದರೆಯಾಗಿರುವ ಹಿನ್ನಲೆಯಲ್ಲಿ ಮನೆಗೆ ತೆರಳಿದ್ದ ಎಂದು ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ. ತದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾನೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Previous articleಇಸ್ಲಾಂ ಧರ್ಮದ ಶರಣರಿಂದ ಹಿರೇಮಠಕ್ಕೆ ೨೫ ಲಕ್ಷ ವೆಚ್ಚದ ರಥ
Next articleಸರಕಾರದ ಅಂಗಳಕ್ಕೆ ಜಾತಿ ಗಣತಿ