ಆನ್ ಲೈನ್ ಗೇಮ್ : ವಿದ್ಯಾರ್ಥಿ ಆತ್ಮಹತ್ಯೆ

0
7

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಪಬ್ ಜಿ ಸೇರಿದಂತೆ ವಿವಿಧ ಗೇಮಿಂಗ್ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿಯಾದ ಘಟನೆ ಹುಬ್ಬಳ್ಳಿಯ ಶಿರಡಿ ನಗರದಲ್ಲಿ ನಡೆದಿದೆ.
ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಮೃತ ವಿದ್ಯಾರ್ಥಿ. ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ. ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಸಾವಿನ ಹಿನ್ನೆಲೆ ಪೊಲೀಸ್‌ ಆಯುಕ್ತ ಶಶಿಕುಮಾ‌ರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕೋಣೆಯ ಪರಿಶೀಲನೆ ಮಾಡಿದ್ದಾರೆ. ಆತ್ಮಹತ್ಯೆ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ಆಸ್ಪತ್ರೆ ಮುಟ್ಟುವುದರೊಳಗಾಗಿ ಆತ ಮೃತಪಟ್ಟಿದ್ದನು ಸದ್ಯ ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಶೋಕನರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Previous articleಕಲಬುರಗಿ ಲೋಕಾ ದಾಳಿಯಲ್ಲಿ ಕ್ಯಾಸಿನೊ ಕಾಯಿನ್ಸ್‌ ಪತ್ತೆ
Next articleಸಿಎಂ ಆಪ್ತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಡಿಎಚ್ಒಗೆ ಪಂಗನಾಮ..!