ಆಂಧ್ರ-ಕರ್ನಾಟಕ‌ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರ ಸಾವು

0
19

ಬಳ್ಳಾರಿ: ಕರ್ನಾಟಕ‌ ಆಂಧ್ರದ ಗಡಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವನಪ್ಪಿದ್ದಾರೆ.ಮೃತರ ಪೈಕಿ ಇಬ್ಬರು ಬಿಮ್ಸ್ ವೈದ್ಯರು ಸೇರಿದ್ದು, ಓರ್ವ ವ್ಯಕ್ತಿ‌ ವಕೀಲರಾಗಿದ್ದಾರೆ. ಓರ್ವ ವೈದ್ಯ ಗಂಭೀರ ಗಾಯಗೊಂಡಿದ್ದಾರೆ.ಬೀಮ್ಸ್ ಅಂಕೋಲಜಿ ವಿಭಾಗದ ಡಾ.ಗೋವಿಂದರಾಜುಲು, ಅಪ್ತಾಲಜಿ ವಿಭಾಗದ ‌ಡಾ. ಯೋಗೀಶ್, ವಕೀಲ ವೆಂಕಟ ನಾಯುಡು ಸಾವನಪ್ಪಿದ್ದಾರೆ.ವೈದ್ಯ ಅಮರೇಗೌಡ ಪಾಟೀಲ್ ಗಂಭೀರ ಗಾಯಗೊಂಡಿದ್ದು, ಬಳ್ಳಾರಿಯ ಟ್ರಾಮಾ ಕೇರ್ ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಕರ್ನಾಟಕ ಗಡಿಯ ಆಂಧ್ರದ ವಿಡಪನಕಲ್ಲು ಸಮೀಪ ಘಟನೆ ನಡೆದಿದ್ದು, ಎಲ್ಲರೂ ಬಳ್ಳಾರಿ ನಿವಾಸಿಗಳಾಗಿದ್ದು, ಬೆಂಗಳೂರಿನಿಂದ ವಾಪಸ್ಸು ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಬರುವಾಗಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ.

Previous articleಮಹಾರಾಷ್ಟ್ರ ಗೆಲುವಿಗೆ ಒಡೆದು ಆಳುವ ನೀತಿ ಆಧಾರ
Next articleವಕ್ಫ್ ಇಡೀ ದೇಶಕ್ಕೆ ಕ್ಯಾನ್ಸರ್ ಇದ್ದಂತೆ: ಗುಡುಗಿದ ಯತ್ನಾಳ್…!