ಅಶ್ಲೀಲ ಸಂದೇಶ ಕಳುಹಿಸಿದ್ದು ನಿಜ

0
25

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ೧ ಆರೋಪಿಯಾಗಿರುವ ಪವಿತ್ರಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿರುವುದು ನಿಜ ಎಂದು ಇನಸ್ಟಾಗ್ರಾಮ್ ದೃಢಪಡಿಸಿದೆ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೊಬೈಲ್ ಹುಡುಕಾಡಿದ್ದರು. ಅದು ಸಿಗಲಿಲ್ಲ. ಕೊನೆಗೆ ಇನಸ್ಟಾಗ್ರಾಮ್‌ಗೆ ಮೊರೆ ಹೋಗಿದ್ದರು. ರಿಟ್ರೀವ್ ಮಾಡಿದ ಆ ಸಂಸ್ಥೆಯವರಿಗೆ ರೇಣುಕಾಸ್ವಾಮಿ ಅಂತಹ ಸಂದೇಶ ಕಳುಹಿಸಿರುವುದು ನಿಜ ಎಂದು ಹೇಳಿದ್ದಾರೆ. ಈ ವರದಿಯನ್ನು ತನಿಖಾಧಿಕಾರಿಗಳು ಚಾರ್ಜ್ಶೀಟ್‌ನಲ್ಲಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Previous articleಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ
Next article7 ರಿಂದ ಟೋಲ್ ಶುಲ್ಕ ಸಂಪೂರ್ಣ ಸ್ಥಗಿತ !