ಅಲಾಯಿ ಕುಣಿಯಲ್ಲಿ ಬಿದ್ದು ಒರ್ವ ಗಂಭೀರ ಗಾಯ

0
30


ಲಿಂಗಸುಗೂರು: ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಅಲಾಯಿ ಕುಣಿ(ಗುಂಡಿ)ಯಲ್ಲಿನ ಬೆಂಕಿಗೆ ವ್ಯಕ್ತಿಯೊರ್ವ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಾಲ್ಲೂಕಿನ
ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿ ಹನುಮಂತ ಎಂದು ಗುರುತಿಸಲಾಗಿದೆ. ಅಲಾಯಿ ನೃತ್ಯ ಮಾಡುತ್ತಿರುವ
ಆಯತಪ್ಪಿ ಕುಣಿಯಲ್ಲಿನ ಬೆಂಕಿಗೆ ಬಿದ್ದಿದ್ದಾನೆ. ಅಲ್ಲಿಯೇ ಇದ್ದ ಜನರು ಬೆಂಕಿಯಿಂದ
ಹೊರಗಡೆ ಎಳೆದಿದ್ದಾರೆ. ಸುಟ್ಟುಗಾಯಗಳಿಂದ ಗಂಭೀರವಾಗಿ ಗಾಯಗೊಂಡ ಹನುಮಂತ ಅವರನ್ನು
ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ
ಮೂಲಗಳು ತಿಳಿಸಿವೆ.

Previous articleನಾವಿನ್ನೂ ಭಿಕ್ಷೆ ಬೇಡ್ಕೊಂಡೇ ಇರಬೇಕಾ: ಕೊತ್ತೂರು ಆಕ್ರೋಶ
Next articleನೀರಜ್ ಚೋಪ್ರಾ ಕ್ಲಾಸಿಕ್ ಕ್ರೀಡಾಕೂಟಕ್ಕೆ ಸಿದ್ದು ಚಾಲನೆ