ಅಪಘಾತ: ಬಳ್ಳಾರಿಯ ಐವರು ಸಾವು

0
11

ಕೊತ್ತಪೇಟೆ(ಆಂಧ್ರ ಪ್ರದೇಶ): ಕೊತ್ತಪೇಟೆ ಬೈಪಾಸ್‍ನ ತೆಕ್ಕಲಯ್ಯದರ್ಗಾದ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಕಾರಣ ಬಳ್ಳಾರಿಯ ಬಸವನಕುಂಟೆ-ದೇವಿನಗರದ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಬಳ್ಳಾರಿಯ ದೇವಿನಗರದ ಬಸವನಕುಂಟೆ ನಿವಾಸಿಗಳಾದ ಅಬ್ದುಲ್ ರೆಹಮಾನ್ ಅವರ ಕುಟುಂಬದ ಸದಸ್ಯರು ಕಾರಿನಲ್ಲಿ ಹೈದರಾಬಾದ್‍ಗೆ ಹೋಗುತ್ತಿದ್ದಾಗ. ಕೊತ್ತಪೇಟ ಬೈಪಾಸ್ ಬಳಿ ಕಾರು ವೇಗವಾಗಿ ಚಾಲನೆ ಮಾಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಕಾರಣ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಮೃತರು ವಾಸಿ(01), ಬುಸ್ರಾ(02), ಮಾರಿಯಾ ಹಾಗೂ ಫಾತಿಮಾ(50) ಮತ್ತು ಅಬ್ದುಲ್ ರಹಮಾನ್(30) ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಶಫಿ, ಅಸ್ಸಾನ್, ಖದೀರ್, ಅಲಿ, ಅಬೀಬ್ ಅವರನ್ನು ಮೆಹಬೂಬ್‍ನಗರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Previous articleಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನತೆ
Next articleಮತ್ತೆ ಹಾರಾಡಿದ ಭಗವಾಧ್ವಜ