ಅಗ್ನಿ ಅವಘಡ: 5 ಹಸು ಬೆಂಕಿಗಾಹುತಿ

0
25

ಹಾಸನ: ಅರಸೀಕೆರೆ ನಗರದ ಹೊರವಲಯದ ಜಾಜೂರು ಗ್ರಾ.ಪಂ. ವ್ಯಾಪ್ತಿಯ ಹೆಂಜಗೊಂಡನಹಳ್ಳಿ ಬಡಾವಣೆಯ ಶಿವಣ್ಣ ಎಂಬುವವರ ತೋಟದ ಮನೆಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಐದು ಹಸುಗಳು, ಒಂದು ಕರು ಜೊತೆಗೆ ಕೊಬ್ಬರಿ, ತೆಂಗಿನ ಕಾಯಿ ಇತ್ಯಾದಿ ಸುಟ್ಟು ಕರಕಲಾಗಿವೆ. ಸುಮಾರು ೨೦ ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ, ನೊಂದ ರೈತ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಜಮೀನು ಮಾಲೀಕರು ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Previous articleಕೊಪ್ಪಳ ಬಂದ್: ಸರ್ಕಾರಿ ಶಾಲೆಗಳಿಗೆ ರಜೆ
Next articleಸರ್ವರೂ ಒಂದೇ ಎಂಬ ಭಾವನೆಯೇ ಪ್ರಸಿದ್ಧಿಗೆ ಕಾರಣ