ಅಗ್ನಿ ಅವಘಡ ಕಣಕಿ ಮೇವಿನ ಬಣವಿ ಭಸ್ಮ

0
24

ವಾಡಿ: ಅಗ್ನಿ ಅವಘಡ ಸಂಭವಿಸಿ ಕಣಕಿ ಮೇವಿನ ಬಣವಿ ಸುಟ್ಟು ಭಸ್ಮವಾದ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ತರ್ಕಸಪೇಟೆ ಗ್ರಾಮದಲ್ಲಿ ಸಂಭವಿಸಿದೆ. ಯಂಕಣ್ಣ ಗಡ್ಡಿಮನಿ ಎನ್ನುವ ರೈತನಿಗೆ ಸೇರಿದ ಜಮೀನಿನಲ್ಲಿ ಈ ದುರಂತ ಸಂಭವಿಸಿದೆ. ಬೇಸಿಗೆಯಲ್ಲಿ

ಎತ್ತುಗಳಿಗೆ ತಿನ್ನಿಸಲು ಅಂದಾಜು 70ಸಾವಿರ ರೂ. ಮೌಲ್ಯದ ಜೋಳದ ಕಣಕಿ ಮೇವು ಖರೀದಿಸಿ ಹೊಲದಲ್ಲಿ ಬಣವಿ ಒಟ್ಟಲಾಗಿತ್ತು. ಸೋಮವಾರ ರಾತ್ರಿ ಈ ಮೇವು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಹೇಗೆ ಹತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ. ವಾಡಿ ಪೊಲೀಸ್ ಠಾಣೆಗೆ ರೈತ ಯಂಕಣ್ಣ ದೂರು ನೀಡಿದ್ದಾರೆ.

Previous articleಅಂಧ ವಿಕಿಪೀಡಿಯಾ ವಿಕಾಸ್ ಕಥೆ ಕೇಳಿದ ಜಗ್ಗೇಶ್
Next articleಅನುಮಾನ ಆಸ್ಪದ ಬ್ಯಾಕ್ ಪ್ಯಾಕ್ ಪತ್ತೆ