ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ಹಣ ಜಪ್ತಿ

0
17

ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಮೂಲಕ ಗೂಡ್ಸ್ ವಾಹನ ಮೂಲಕ ಮಹಾರಾಷ್ಟ್ರದಿಂದ ಕೇರಳಕ್ಕೆ ಹೋಗುತ್ತಿದ್ದ ಕೋಟ್ಯಾಂತರ ಹಣವನ್ನು ಬೆಳಗಾವಿ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.73 ಕೋಟಿ ರೂ.ಪತ್ತೆಯಾಗಿದೆ. ಗೂಡ್ಸ್‌ ವಾಹನದಲ್ಲಿ ಮಾರ್ಪಾಡು ಮಾಡಿ ಹಣ ಸಾಗಾಟ ಮಾಡುತ್ತಿದ್ದ ಸಾಂಗ್ಲಿ ಮೂಲದ ಸಚಿನ್ ಮೆನಕುದಳೆ, ಮಾರುತಿ ಮಾರಗುಡೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಳ ಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಗಾಯತ್ರಿ ಮಹಾಯಾಗ: ಆಹ್ವಾನ ಪತ್ರಿಕೆ ಬಿಡುಗಡೆ
Next articleಜೋಶಿ ಅವರಿಗೆ ಕಳಂಕ ಅಂಟಿಸುವ ವಿಫಲ ಯತ್ನ