ಹೈ ಕಮಾಂಡ್ ಹೇಳಿದ್ರೆ 2 ಕಡೆ ಸ್ಪರ್ಧೆ: ರಾಮುಲು

0
16
ರಾಮುಲು

ಬಳ್ಳಾರಿ: ಬಿಜೆಪಿ ಹೈ ಕಮಾಂಡ್ ಬಯಸಿದರೆ ಈ ಬಾರಿಯು ಎರಡು ಕಡೆ ಸ್ಪರ್ಧೆ ಮಾಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಸಂಡೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ಬರುತ್ತಿದೆ. ನಾನು ಬಳ್ಳಾರಿಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದರು.
ನಾನು ಸಂಡೂರು ಕ್ಷೇತ್ರದಿಂದ ಸಹ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ನನ್ನ ಮೇಲೆ ಇದೆ. ಒಂದು ವೇಳೆ ಹೈ ಕಮಾಂಡ್ ಬಯಸಿದರೆ ಇಲ್ಲಿ ಸ್ಪರ್ಧೆ ಮಾಡುವೆ ಎಂದರು.
ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಬೇಕು. ನಾವು ಸಾಕಷ್ಟು ಪ್ರಯತ್ನ ಪಟ್ಟರೂ ಹಿಂದೆ ಆಗಿಲ್ಲ. ಈ ಬಾರಿ ಶತಾಯ ಗತಾಯ ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕು ಎಂಬ ಗಟ್ಟಿ ಯತ್ನದಿಂದ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಂದು ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

Previous articleಶಾ ಆಗಮನಕ್ಕೆ ಕ್ಷಣಗಣನೆ: ಸಮಾವೇಶ ಸ್ಥಳಕ್ಕೆ ಆಗಮಿಸಿದ ಬಿಎಸ್‌ವೈ
Next articleಹುಬ್ಬಳ್ಳಿಗೆ ಬಂದಿಳಿದ ಅಮಿತ್ ಶಾ