ಹಿಪ್ಪರಗಿ ಜಲಾಶಯಕ್ಕೆ 12 ಸಾವಿರ ಕ್ಯುಸೆಕ್ ನೀರು

0
14

ಬಾಗಲಕೋಟೆ: ಜಿಲ್ಲೆಯ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಬಿಡುತ್ತಿರುವ ನೀರು ಕಳೆದ ವಾರದಿಂದ 12 ಸಾವಿರ ಕ್ಯುಸೆಕ್‌ನಷ್ಟು ಸಾಮಾನ್ಯವಾಗಿ ದಿನಂಪ್ರತಿ ಹರಿದು ಬರುತ್ತಿದೆ.
ಮಹಾರಾಷ್ಟ್ರದಲ್ಲಿಯೂ ಮಳೆರಾಯನ ಆರ್ಭಟವಿಲ್ಲದ ಕಾರಣ ಕನಿಷ್ಠ ಮಟ್ಟದಲ್ಲಿ ನೀರು ಹರಿದು ಬರುತ್ತಿರಲು ಕಾರಣವಾಗಿದೆ.
ಹಿಪ್ಪರಗಿ ಜಲಾಶಯಗಳಿಂದ ಶೇಖರಣೆ ಮಾಡದೆ ನೀರನ್ನು ಮೂರು ಗೇಟ್‌ಗಳ ಮೂಲಕ ಬಂದಷ್ಟೇ ನೀರನ್ನು ಹೊರ ಹಾಕುತ್ತಿದ್ದು, ಮುಂದಿನ ಪ್ರದೇಶಗಳಿಗೆ ನೀರಿನ ಕೊರತೆಯಾಗಬಾರದೆಂಬ ದೃಷ್ಟಿಯಿಂದ ಜಲಾಶಯದಲ್ಲಿ ನೀರು ಶೇಖರಣೆ ಮಾಡುತ್ತಿಲ್ಲ.
ಬಹುತೇಕ ಜುಲೈ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಹಿಪ್ಪರಗಿ ಜಲಾಶಯದಲ್ಲಿ ಯಾವುದೇ ನೀರಿನ ಸಂಗ್ರಹಣೆ ಕಾರ್ಯವಿಲ್ಲದಿರುವುದು ಭಯಾನಕವಾಗಿ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೀರು ಹರಿದು ಬಂದಲ್ಲಿ ಹಿಪ್ಪರಗಿ ಜಲಾಶಯದ ಹಿನ್ನೀರನ ಜನತೆ ಹಾಗೂ ರೈತರು ಕೊಂಚ ನಿರಾಳತೆ ಕಾಣುವಲ್ಲಿ ಕಾರಣವಾಗಲಿದ್ದು, ಇಲ್ಲವಾದಲ್ಲಿ ನೀರಿನ ಅಭಾವ ಎದುರಿಸುವ ಭೀತಿಯಲ್ಲಿದ್ದಾರೆ.

Previous articleದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆಗೆ ನಿಷೇಧ
Next articleಸಂಘಗಳ ಚುನಾವಣೆಯಾಗಲು ಶಾಸಕ ಸವದಿಯೇ ಕಾರಣ