ಹಲ್ಲೆ ಪ್ರಕರಣಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ

0
22

ಬೆಳಗಾವಿ: ಹಲ್ಲೆ ಪ್ರಕರಣಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ, ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇತ್ತಿಚೆಗೆ ಬೆಳಗಾವಿ ಉದ್ಯಮಭಾಗ ಪೋಲಿಸ್‌ರಿಂದ ಅಂಗವಿಕಲನ ಮೇಲೆ ಹಲ್ಲೆ ಪ್ರಕರಣ ಕುರಿತು ಇಂತಹ ಹಲ್ಲೆ ಪ್ರಕರಣಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತೆ, ನಾನು ಪ್ರಗತಿ ಪರಿಶೀಲನೆ ಮಾಡಲು ಬಂದಿರುವುದೇ ಇಂತಹ ಘಟನೆಗಳ ವಿಚಾರಕ್ಕೆ ಯಾವ ರೀತಿ ಪೋಲಿಸರು ಜನಸ್ನೇಹಿಯಾಗಿರಬೇಕು, ಜನಸ್ನೇಹಿ ಪೋಲಿಸರು ಇದ್ದಾರಾ ಇಲ್ವಾ ಪರಿಶೀಲನೆ ಮಾಡುತ್ತೇನೆ ಇಂತಹ ಘಟನೆ ನ‌ಡೆದಿದ್ದು ನಿಜವಾಗಿದ್ದರೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ, ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ

Previous articleಕರ್ನಾಟಕದಲ್ಲಿರುವ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿ
Next articleಅಮೆರಿಕದ ಕಂಪನಿಗಳ ಹೂಡಿಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ವೇದಿಕೆ ರಚನೆ