ಸೇವೆಯ ಹೆಸರಲ್ಲಿ ಮತಾಂತರ ಮಾಡಲಾಗಿತ್ತು-ಈಗ ಕಾಯ್ದೆ ಮೂಲಕ ಕಡಿವಾಣ ಹಾಕಲಾಗಿದೆ – ಆರಗ ಜ್ಞಾನೇಂದ್ರ

0
107

ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹಳ ಸಂತೋಷ ವಿಚಾರವಿದು. ನಿನ್ನೆ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗಿದೆ. ಬೆಳಗಾವಿಯ ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿತ್ತು. ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಂದಿದ್ದೆವು. ಈಗ ಬಿಲ್ ಎರಡು ಸದನದಲ್ಲಿ ಪಾಸ್ ಆಗಿದೆ. ಗೋ ಹತ್ಯೆ , ಮತಾಂತರ ಎರಡು ಪಾಸ್ ಆಗಿದೆ.

ವೈಯಕ್ತಿಕವಾಗಿ ಅತ್ಯಂತ ಸಂತೋಷವಾಗಿದೆ. ನಾನು ಗೃಹ ಸಚಿವನಾಗಿ ಬಿಲ್ ಮಂಡಿಸಿದ್ದೆ, ಹೆಮ್ಮೆ ಆಗುತ್ತಿದೆ. ಹಿಂದೂ ಧರ್ಮದ ಬುಡ ಅಲ್ಲಾಡುತ್ತಿತ್ತು. ಮತಾಂತರ ಮೂಲಕ ಧರ್ಮ ಒಡೆಯಲಾಗಿತ್ತು. ಸೇವೆಯ ಹೆಸರಲ್ಲಿ ಮತಾಂತರ ಮಾಡಲಾಗಿತ್ತು. ಈಗ ಕಾಯ್ದೆ ಮೂಲಕ ಕಡಿವಾಣ ಹಾಕಲಾಗಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಹಿಂದಿನಿಂದ ಮಾಡುತ್ತಿದೆ. ಕಾಂಗ್ರೆಸ್ ಮುಖವಾಡ ಈಗ ಕಳಚಿದೆ ಎಂದು ಹೇಳಿದ್ರು.

Previous articleಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ – ನಾಳೆ ಕಲಬುರ್ಗಿಗೆ ಸಿಎಂ ಬೊಮ್ಮಾಯಿ
Next articleತಹಶೀಲ್ದಾರ್​​​​​ ಎದುರೇ ಬೈದಾಡಿಕೊಂಡ ರೇಣುಕಾಚಾರ್ಯ-ಶಾಂತನಗೌಡ