ಷೇರು ಮಾರುಕಟ್ಟೆಯಲ್ಲಿ ದುಪಟ್ಟು ಹಣಗಳಿಸುವ ಆಮಿಷ: 44 ಲಕ್ಷ ರೂ ವಂಚನೆ

0
27

ಚಿಕ್ಕಮಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ದುಪಟ್ಟು ಹಣ ಗಳಿಸುವ‌ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 44ಲಕ್ಷ ರೂ. ಸೈಬರ್ ವಂಚಕರು ವಂಚಿಸಿದ ಘಟನೆ ನಡೆದಿದೆ.

2024ರ ಡಿಸೆಂಬರ್ 15ರಂದು ನಗರದ ವ್ಯಕ್ತಿಯೊಬ್ಬರಿಗೆ ಅನಾಮಧೇಯ ಮೊಬೈಲ್ ನಂಬರ್‌ನಿಂದ ವ್ಯಾಟ್ಸಪ್‌ಗೆ ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿ ದುಪಟ್ಟು ಲಾಂಭಶಗಳಿಸುವ ಆಸಕ್ತಿ ಇದ್ದರೇ ರಿಪ್ಲೇ ಮಾಡುವಂತೆ ಮೇಸೆಜ್ ಬಂದಿದೆ. ಇದನ್ನು ನಂಬಿದ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಆಸಕ್ತಿ ಹೊಂದಿರುತ್ತೇನೆಂದು ಹೇಳಿ ಸೈಬರ್ ವಂಚಕರು ನೀಡಿದ ಖಾತೆಗೆ 2025 ಫೆಬ್ರವರಿ 19ರಂದು ಮತ್ತು ಮಾ. 15 ರಂದು ಒಟ್ಟು 44 ಲಕ್ಷ ರೂ. ಹಾಕಿದ್ದು, ವ್ಯಕ್ತಿಗೆ ಅಸಲು ಅಥವಾ ಲಾಭದ ಹಣವನ್ನು ನೀಡದೆ ವಂಚಿಸಿದ್ದಾರೆ.

ಈ ಸಂಬಂಧ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಮುಗ್ದ ಜನರು ಬಲಿಪಶುವಾಗುತ್ತಿ ದ್ದಾರೆ. ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.

Previous articleಅಂತೂ ಅನುಮಾನ ನಿಜವಾಯಿತು! ಎಂದ ಕುಮಾರಸ್ವಾಮಿ
Next articleಜೈನರ ಗಣತಿಗಾಗಿ ರಾಜ್ಯಾದಂತ್ಯ ಪಾದಯಾತ್ರೆ