ಶಾಸಕರ ಎದುರಿನಲ್ಲೇ ಆಪ್ತನಿಂದ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ

0
22

ಚಿಕ್ಕೋಡಿ: ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಆಪ್ತನೊಬ್ಬ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ನಡೆದಿದೆ.
ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರಾಜು ಕಾಗೆ ಎದುರು ಕಾಗೆ ಆಪ್ತ ಸಂತೋಷ ಚುರಮೂಲೆ ಎಂಬಾತ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕರನ್ನು ಮೆಚ್ಚಿಸಲು ರಾಜು ಕಾಗೆ ಮುಂದೆಯೇ ಸೆಲ್ಫಿ ವಿಡಿಯೋ ಮಾಡಿ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದಾನೆ. ರಾಜು ಕಾಗೆಯ ಬಗ್ಗೆ ಮಾಧ್ಯಮದವರು ಬೇರೆ ದೃಷ್ಟಿಯಿಂದ ಸುದ್ದಿಗಳನ್ನು ವೈರಲ್ ಮಾಡಿದರೆ ಮನೆ ನುಗ್ಗಿ ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾನೆ ಇಷ್ಟೆಲ್ಲಾ ಶಾಸಕರ ಎದುರೇ ಬೆದರಿಕೆ ಹಾಕುತ್ತಿದ್ದರೂ ಶಾಸಕರು ಮಾತ್ರ ಏನು ಮಾತನಾಡದೇ ನಿಂತಿದ್ದಾರೆ.

Previous articleಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜನ ಪವಿತ್ರ ಸನ್ನಿಧಿಯಲ್ಲಿ ನಟ ಶರಣ
Next articleಪಾತ್ರ ಇದೆಯೂ ಇಲ್ಲವೋ ಎಂದು ನ್ಯಾಯಾಲಯ ನಿರ್ಧಾರ ಮಾಡಲಿದೆ