ಬೆಳಗಾವಿ: ಬೆಳಗಾವಿ-ದೆಹಲಿ ಇಂಡಿಗೋ ವಿಮಾನದಲ್ಲಿ ಕನ್ನಡದ ಹಬ್ಬ !! ಆಚರಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೆಳಗಾವಿ ಇನ್ಫ್ರಾ ಪುಟದಿಂದ ಈ ಸುದ್ದಿ ಹಂಚಿಕೊಂಡಿದ್ದು ಬೆಳಗಾವಿ-ದೆಹಲಿ ಇಂಡಿಗೋ ವಿಮಾನದಲ್ಲಿ ಕನ್ನಡದ ಹಬ್ಬ !! ಬೆಳಗಾವಿ ವಿಮಾನ ನಿಲ್ದಾಣದ ಇಂಡಿಗೋ ಬಳಗದ ವತಿಯಿಂದ ಬೆಳಗಾವಿ ದೆಹಲಿ ಏರ್ಬಸ್ A320 ವಿಮಾನದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಎಂದಿದ್ದಾರೆ.
ಇತ್ತಿಚೆಗೆ ಆರಂಭವಾದ ವಿಮಾನ ಹಾರಾಟದಲ್ಲಿ ಮೊದಲ ದಿನ ಫ್ಲೈಟ್ ಅನೌನ್ಸ್‌ಮೆಂಟ್ ಸಹ ಬೈಲಹೊಂಗಲದವ್ರೇ ಆದ ಅಕ್ಷಯ್ ಪಾಟೀಲ್ ವಿಮಾನದ ಪೈಲೆಟ್ ಆಗಿ ಕನ್ನಡ ಭಾಷಾದಾಗ ಎಲ್ಲ ಪ್ರಯಾಣಿಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋಗಿದ್ರು. ಇದಕ್ಕಿಂತ ಹೆಚ್ಚಿನ ಖುಷಿ ಕನ್ನಡಿಗರಿಗೆ ಏನ್ ಬೇಕ ಹೇಳ್ರಿ.
























