ವಿಧಾನ ಸಭೆ ಸಚಿವಾಲಯದಲ್ಲಿ ಪುಸ್ತಕ ಮೇಳ

0
61

ಸಾರ್ವಜನಿಕರಿಂದ ಪುಸ್ತಕ ಮೇಳ ಲಾಂಛನದ ವಿನ್ಯಾಸ ಆಹ್ವಾನ

ಬೆಂಗಳೂರು : ಕರ್ನಾಟಕ ವಿಧಾನ ಸಭೆ ಸಚಿವಾಲಯದ ವತಿಯಿಂದ ಫೆಬ್ರುವರಿ 28, 2025 ರಿಂದ ಮಾರ್ಚ 03, 2025ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಪುಸ್ತಕ ಮೇಳವನ್ನು ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗುತ್ತಿದೆ.

ಈ ಪುಸ್ತಕ ಮೇಳಕ್ಕೆ ಸಂಬಂಧಿಸಿದ ಲಾಂಛನವನ್ನು ವಿನ್ಯಾಸಗೊಳಿಸಲು ಉದ್ದೇಶಿಸಿದ್ದು, ಲಾಂಛನ ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಆಯ್ಕೆಗೊಳ್ಳುವ ಲಾಂಛನದ ವಿನ್ಯಾಸಕರಿಗೆ ಗೌರವಪೂರ್ವಕವಾಗಿ ಬಹುಮಾನವನ್ನು ನೀಡಲಾಗುವುದು.

ಆದ್ದರಿಂದ ಆಸಕ್ತರು ಈ ಪುಸ್ತಕ ಮೇಳ ಕಾರ್ಯಕ್ರಮಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ, ತಮ್ಮ ಅಂಚೆ ವಿಳಾಸ, ದೂರವಾಣಿ ಸಂಖ್ಯೆಯ ವಿವರಗಳೊಂದಿಗೆ ಫೆಬ್ರುವರಿ 03, 2025 ರೊಳಗಾಗಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಕೊಠಡಿ ಸಂಖ್ಯೆ:121, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು-560001 ಇವರಿಗೆ ಕಳುಹಿಸುವಂತೆ ಕರ್ನಾಟಕ ವಿಧಾನ ಸಭೆ ಸಚಿವಾಲಯ ನಿರ್ದೆಶಕ ಬಿ.ಎಸ್. ಮಹಾಲಿಂಗೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleಉತ್ಸಾಹಿ ಫೆಲೋಗಳ ಉತ್ತಮ ಕೆಲಸ ಸಾರ್ಥಕ ಎನಿಸಿದೆ
Next articleಬಾಲಕಿಗೆ ಲೈಂಗಿಕ ಕಿರುಕುಳ: ತ್ವರಿತ ಕ್ರಮಕ್ಕೆ ಸಚಿವೆ ಹೆಬ್ಬಾಳಕರ್ ಸೂಚನೆ