ವಿಧಾನಸಭೆ ಚುನಾವಣೆಗೆ ʼಜೈ ಹನುಮಾನ್ ಸೇನೆʼ ಸಿದ್ಧ

0
14
ಕಾರ್ಕಳ

ಕಾರ್ಕಳ: ಕರಾವಳಿಯ ಕಾರ್ಕಳ, ಮಲೆನಾಡು, ಕಲ್ಯಾಣ ಕರ್ನಾಟಕ, ಹೈದರಬಾದ್ ಕರ್ನಾಟಕದ ಭಾಗದಲ್ಲಿ ವಿಧಾನಸಭೆಗೆ ಸ್ಪರ್ಧಿಸಲು “ಜೈ ಹನುಮಾನ್ ಸೇನೆ” ತಯಾರಿ ನಡೆಸಿದೆ ಎಂದು ಜೈ ಹನುಮ ಸೇನೆಯ ರಾಜ್ಯ ಸಂಚಾಲಕ ಹನುಮಂತಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮನ ಉದಾತ್ತ ವಿಚಾರಗಳನ್ನು ಹನುಮನ ಭಕ್ತರಿಗೆ ತಲುಪಿಸುವುದು ಧೈಯಗಳನ್ನಿಟ್ಟುಕೊಂಡು “ಜೈ ಹನುಮಾನ್ ಸೇನೆ” ರಚನೆಯಾಗಿದ್ದು, ನಮ್ಮದೈವ ಹನುಮನನ್ನು ಪೂಜಿಸುವ, ಆರಾಧಿಸುವ ಜನರ ರಕ್ಷಣೆ, ಅವರ ಏಳಿಗೆ ಸೇನೆಯ ಮುಖ್ಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಹನುಮನ ಜನ್ಮಭೂಮಿ ಅಂಜನಾದ್ರಿಯಿಂದ ಜೈ ಹನುಮಾನ್ ಸೇನೆಯ ಯಾನ ರಾಜ್ಯಾದ್ಯಂತ ಆರಂಭಗೊಂಡಿದೆ. ಈ ಬಾರಿ ಚುನಾವಣೆಗೆ ಸೇನೆ ಸಿದ್ಧವಾಗಿದೆ. ಕಾರ್ಕಳದಲ್ಲಿ ಸ್ವತಃ ನಾನೇ ಸ್ಪರ್ದಿಸಲಿದ್ದೇನೆ ಎಂದರು.

Previous articleನಿವೃತ್ತಿ ಘೋಷಿಸಿದ ಈಶ್ವರಪ್ಪ
Next articleಈಶ್ವರಪ್ಪ ನಿರ್ಧಾರಕ್ಕೆ ಬೆಲ್ಲದ ಸ್ವಾಗತ