ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವು

0
135
cyrus mistry

ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಇಂದು ರಸ್ತೆ ಅಪಘಾತದಲ್ಲಿ ನಿಧನರಾದರು. ಮಧ್ಯಾಹ್ನ ಮುಂಬೈ ಸಮೀಪ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಅಹಮದಾಬಾದ್​ನಿಂದ ಮುಂಬೈಗೆ ಸೈರಸ್ ಮಿಸ್ತ್ರಿ ಮರ್ಸಿಡಿಸ್ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮುಂಬೈನ ಸಮೀಪದ ಪಾಲ್ಘರ್​ ಜಿಲ್ಲೆಯ ಸೂರ್ಯ ನದಿಯ ಸೇತುವೆ ಮೇಲೆ ಕಾರು ಏಕಾಏಕಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಿಸ್ತ್ರಿ ಹಾಗೂ ಇನ್ನೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
2012ರಲ್ಲಿ ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ನೇಮಕವಾಗಿದ್ದರು. ಬಳಿಕ ಟಾಟಾ ನಿರ್ದೇಶಕರ ಮಂಡಳಿ 2016ರ ಅಕ್ಟೋಬರ್ 24ರಂದು ಅವರನ್ನು ವಜಾಗೊಳಿಸಿತ್ತು.

ಸೈರಸ್ ಮಿಸ್ತ್ರಿ
Previous articleಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಸಮರ್ಥ ವಾದ ಮಂಡನೆಗೆ ಸರ್ಕಾರ ಸಿದ್ಧ: ಮುಖ್ಯಮಂತ್ರಿ
Next articleಗಣೇಶ ವಿಸರ್ಜನೆ ವೇಳೆ ಕಾಲು ಜಾರಿ ವಿದ್ಯಾರ್ಥಿ ಸಾವು