ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದೆ ಶಿಲ್ಪಾ ಶೆಟ್ಟಿ

0
34

ಚಿಕ್ಕಮಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಆನೆ ಒಂದನ್ನು ಅರಣ್ಯ ಇಲಾಖೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ರಂಭಾಪುರಿ ಮಠಕ್ಕೆ ಈ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ಕೊಟ್ಟ ನಟಿ ಶಿಲ್ಪಾ ಶೆಟ್ಟಿ ಈ ಮೂಲಕ ಇಲಾಖೆಗೆ ನೆರವಾಗಿದ್ದಾರೆ.
ರಂಭಾಪುರಿ ಶ್ರೀಗಳು ರೋಬೋಟಿಕ್ ಆನೆಯನ್ನು ಉದ್ಘಾಟನೆ ಮಾಡಿದ್ದಾರೆ. ನೋಡಲು ಸೇಮ್ ನಿಜವಾದ ಆನೆಯಂತೆ ಕಾಣುವ ರೋಬೋಟಿಕ್ ಎಲಿಫೆಂಟ್ ಹಲವು ವಿಶೇಷತೆಗಳನ್ನ ಹೊಂದಿದೆ, ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಳುಗಾಡಿಸುತ್ತಿರವ ಆನೆ ಗಮನ ಸೆಳೆಯುತ್ತಿದೆ.
ನೋಡಿದ ಕೂಡಲೇ ನಿಜವಾದ ಆನೆಯಂತೆಯೇ ಭಾಸವಾಗುವ ಈ ಆನೆ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠಕ್ಕೆ ಹಸ್ತಾಂತರವಾಗಿದೆ. ಎನ್.ಆರ್.ಪುರ ತಾಲೂಕಿನ ಭದ್ರಾ ನದಿ ತಟದಲ್ಲಿರುವ ರಂಭಾಪುರಿ ಮಠ ಈ ವಿಶೇಷ ಆನೆಯ ಆಗಮನಕ್ಕೆ ಸಾಕ್ಷಿಯಾಗಿದೆ.

Previous articleಪಂಚಮಸಾಲಿ ಹೋರಾಟದ ಮೇಲೆ ಬಲಪ್ರಯೋಗ
Next articleಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶವೇ ಇಲ್ಲ…