ಮೋದಿ ಸರ್‌ನೇಮ್‌ ವಿರುದ್ದ ವಿವಾದತ್ಮಕ ಹೇಳಿಕೆ: ರಾಹುಲ್ ಗಾಂಧಿ ದೋಷಿ

0
12
ರಾಹುಲ್‌

ರಾಹುಲ್ ಗಾಂಧಿ ವಿರುದ್ಧ 2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಾಗತ್ತು. ಸೂಕ್ತ ವಿಚಾರಣೆ ನಡೆಸಿದ ಸೂರತ್‌ ಕೋರ್ಟ್‌, ರಾಹುಲ್‌ ಗಾಂಧಿಯನ್ನು ತಪ್ಪಿತಸ್ಥ ಎಂದು ಹೇಳಿದೆ. 2019ರ ಸಮಾವೇಶವೊಂದರಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಕಳ್ಳರಿಗೆಲ್ಲಾ ಮೋದಿ ಎನ್ನುವ ಸರ್‌ನೇಮ್‌ ಯಾಕಿರುತ್ತದೆ ಎಂದು ಪ್ರಶ್ನೆ ಮಾಡಿದ್ದರು. ರಾಹುಲ್‌ ಗಾಂಧಿ ಅವರ ಈ ಹೇಳಿಕೆಯ ಕುರಿತಾಗಿ ಬಿಜೆಪಿ ಶಾಸಕ ಹಾಗೂ ಅಂದಿನ ಸಚಿವ ಪೂರ್ಣೆಶ್‌ ಮೋದಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.ಕೋರ್ಟ್‌ ರಾಹುಲ್‌ ಗಾಂಧಿಯನ್ನು ತಪ್ಪಿತಸ್ಥ ಎನ್ನುವ ಮೂಲಕ 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಕೋರ್ಟ್‌ ಶಿಕ್ಷೆ ಪ್ರಕಟ ಮಾಡಿದ ಬೆನ್ನಲ್ಲಿಯೇ ಜಾಮೀನು ಪಡೆದುಕೊಂಡ ರಾಹುಲ್‌ ಗಾಂಧಿ ಶಿಕ್ಷೆಯಿಂದ ಪಾರಾಗಿದ್ದಾರೆ, ತಕ್ಷಣವೇ ಸೂರತ್‌ ಏರ್ಪೋರ್ಟ್‌ನತ್ತ ಮುಖ ಮಾಡಿದ್ದಾರೆ.

Previous articleಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೀರೆ ಪೊಲೀಸ್ ವಶಕ್ಕೆ
Next articleಎಸ್.ಎಂ. ಕೃಷ್ಣ ಸೇರಿದಂತೆ 54 ಗಣ್ಯರಿಗೆ ‘ಪದ್ಮ’ ಪ್ರಶಸ್ತಿ ಪ್ರದಾನ