ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

0
10

ಮಂಡ್ಯ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯದ ಗಾಂಧಿನಗರ 4ನೇ ಕ್ರಾಸ್‌ನಲ್ಲಿ ನಡೆದಿದೆ.
ಅಕ್ಷಯ್ ಅಲಿಯಾಸ್ ಗಂಟ್ಲು(22) ಕೊಲೆಯಾದ ಯುವಕ‌ ಎಂದು ಹೇಳಲಾಗಿದ್ದು, ಹಳೇ ದ್ವೇಷಕ್ಕೆ ಕೊಚ್ಚಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ ಕಿರಾತಕರು ಅಟ್ಯಾಕ್ ಮಾಡಿದ್ದು, ಸುಮಾರು 100 ಮೀಟರ್ ಅಟ್ಟಾಡಿಸಿ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಮನೆಯೊಂದರ ಕಾಂಪೌಂಡ್ ಒಳಗೆ ನುಗ್ಗಿದರೂ ಬಿಡದೆ ಹಲ್ಲೆ ನಡೆಸಿದ್ದಾರೆ. ಭೀಕರ ಹಲ್ಲೆಯಿಂದಾಗಿ ಅಕ್ಷಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಐದು ಜನ ದುಷ್ಕರ್ಮಿಗಳ ಗುಂಪಿನಿಂದ ಕೃತ್ಯ ನಡೆದಿದ್ದು, ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Previous articleಗಣೇಶ ಚತುರ್ಥಿ ಆಚರಣೆ ಎಂದು?
Next articleಫೈನಲ್ ಗೆ ಲಗ್ಗೆ ಇಟ್ಟ ಭಾರತ