ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಮಸಿ…

0
24

ಬೆಳಗಾವಿ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂಣೆಯಲ್ಲಿ ನಡೆದಿದೆ.
ಚಂದ್ರಕಾಂತ ಪಾಟೀಲ ಅವರು ಮಹಾಪುರುಷರ ಕುರಿತು ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ, ಕಾರ್ಯಕರ್ತನೊಬ್ಬ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಕಪ್ಪು ಮಸಿ ಎರೆಚಿ ಪರಾರಿಯಾಗುತ್ತಿದ್ದಾಗ ಪೋಲೀಸರು ಆತನನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರು ಬೆಳಗಾವಿ ಗಡಿವಿವಾದದ ಕುರಿತು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದ್ರೆ, ಬೆಳಗಾವಿ ಜಿಲ್ಲಾಡಳಿತ ಬೆಳಗಾವಿ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಚಂದ್ರಕಾಂತ ಪಾಟೀಲ ಬೆಳಗಾವಿ ಭೇಟಿಯನ್ನು ಕೈಬಿಟ್ಟಿದ್ದರು.

Previous articleಶಿರಾಡಿ ಘಾಟ್ ದುರಸ್ತಿ-ವಾರದೊಳಗೆ ವಿಶೇಷ ಸಭೆ
Next articleಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದ ವಿದೇಶಿಯರು