ಪ್ರಯಾಗರಾಜ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಮಹಾಕುಂಭಮೇಳದಲ್ಲಿ ಭಾಗವಹಿಸಿದರು.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪುತ್ರ ಐಸಿಸಿ ಅಧ್ಯಕ್ಷ ಜಯ ಶಾ ಹಾಗೂ ಕುಟುಂಬಸ್ಥರ ಜೊತೆ ಆಗಮಿಸಿದ ಅಮಿತ್ ಶಾ ಅವರು ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಅಮಿತ್ ಶಾ ಅವರು ಬಳಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದರು. ನಂತರ ಅಕ್ಷಯವಟ್ ಪಾಟಲಪುರಿ ಮಂದಿರದಲ್ಲಿ ಅಖಾಡದ ಮುಖ್ಯಸ್ಥರು, ಸಾಧುಗಳೊಂದಿಗೆ ಭೋಜನ ಸವಿದರು. ಪವಿತ್ರ ಸ್ನಾನದ ನಂತರ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿ ಸಂಗಮ ಆರತಿಯಲ್ಲಿ ಪಾಲ್ಗೊಂಡರು. ಪವಿತ್ರ ಆಚರಣೆಗಳಲ್ಲಿ ಅಮಿತ್ ಶಾ ಅವರೊಂದಿಗೆ ಅವರ ಪತ್ನಿ ಸೋನಾಲ್ ಶಾ, ಮಗ ಜಯ್ ಶಾ, ಸೊಸೆ ಮತ್ತು ಮೊಮ್ಮಕ್ಕಳು ಸಹ ಇದ್ದರು.
