ಮಂತ್ರಾಲಯದ ಶ್ರೀರಾಯರ ಮಠದ ಹುಂಡಿಯಲ್ಲಿ 3.24 ಕೋಟಿ ಹಣ ಸಂಗ್ರಹ

0
23

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಭಕ್ತರು ಹಾಕಿದ ಹಣವನ್ನು ಬುಧವಾರ ಶ್ರೀಮಠದಲ್ಲಿ ಸ್ವಯಂ ಸೇವಕರು ಹಾಗೂ ಭಕ್ತರು ಎಣಿಕೆ ಕಾರ್ಯವನ್ನು ಬೆಳಿಗ್ಗೆಯಿಂದ ನಡೆಸಿದ್ದು, ಒಟ್ಟು 3.24 ಕೋಟಿಯಷ್ಟು ಹಣ ಸಂಗ್ರಹವಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 24ರಿಂದ ಡಿಸೆಂಬರ್ 27ವರೆಗೆ ಒಟ್ಟು 34 ದಿನಗಳಲ್ಲಿ ಹುಂಡಿಯಲ್ಲಿ ಸಂಗ್ರಹಿಸಿದ ಹಣವನ್ನು ಬೆಳಿಗ್ಗೆ 9 ಗಂಟೆಯಿಂದ ಆರಂಭಿಸಲಾಗಿದ್ದು, 3,24,07,396 ಹಣದ ನೋಟುಗಳು ಸಂಗ್ರಹವಾಗಿದೆ. ಇನ್ನೂ ನಾಣ್ಯಗಳ ಎಣಿಕೆ ಕಾರ್ಯವೂ ಮುಂದುವರೆದಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Previous articleದತ್ತಪೀಠದಲ್ಲಿ ಹರಕೆ ತೀರಿಸಿದ ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ
Next articleಸರ್ಕಾರಿ ಚಕ್ರವ್ಯೂಹದಲಿ ಸಂತ್ರಸ್ತ!