ಬೆಳಗಾವಿ ಬಿಜೆಪಿಯಲ್ಲಿ ಟೆನ್ಶನ್ ಟೆನ್ಶನ್…

0
16

ಬೆಳಗಾವಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಅಂತರಿಕ ಗೊಂದಲ ಬಗೆಹರಿಯುವ ಲಕ್ಷಣಗಳು ಕಾಣಸಿಗುತ್ತಿಲ್ಲ.
ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾರೀ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ಹಠಾತ್ ಆಗಿ ಸಭೆಯನ್ನು ಬೆಳಗಾವಿಗೆ ಸ್ಥಳಾಂತರಿಸಲಾಯಿತು.
ಬೆಳಗಾವಿ ಹೊರವಲಯದ ಖಾಸಗಿ ಹೊಟೇಲ್ ನಲ್ಲಿ ಕೋರಕಮೀಟಿ ಸಭೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಧ್ಯಕ್ಷತೆಯಲ್ಲಿ ಆರಂಭವಾಗಿದೆ.
ಅದೇ ಹೊಟೇಲನಲ್ಲಿ ಮತ್ತೊಂದು ಕಡೆಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಿದ್ದಾರೆ, ಈ ಸಭೆಯಲ್ಲಿ ನಾಗೇಶ ಮನ್ನೋಳಕರ ಸಹ ಹಾಜರಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಜೋಶಿ, ನಮ್ಮಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ. ಆಕಾಂಕ್ಷಿಗಳು ಹೆಚ್ಚಿಗಿದ್ದಾರೆ, ಹೀಗಾಗಿ ಎಲ್ಲವನ್ನೂ ಅಳೆದುತತೂಗಿ ನಿಧರ್ಾರ ಮಾಡುತ್ತೇವೆ ಎಂದು ಹೇಳಿದರು.
ಎರಡು ದಿನಗಳ ಕಾಲ ವಿಸ್ತೃತ ಸಭೆ ಮಾಡಿ ರಾಷ್ಟ್ರೀಯ ಚುನಾವಣೆ ಸಂಸದೀಯ ಮಂಡಳಿಗೆ ಶಿಫಾರಸ್ಸು ಮಾಡುವುದಾಗಿ ಅವರು ಹೇಳಿದರು.
ನಿರ್ಮಲಕುಮಾರ ಸುರಾನಾ ಈ ಸಂದರ್ಭದಲ್ಲಿ ಹಾಜರಿದ್ದರು,.

Previous articleಪಕ್ಷ ತೊರೆದಿದ್ದಕ್ಕಾಗಿ ಅಣಕು ಶವಯಾತ್ರೆ
Next articleಭ್ರಷ್ಟಾಚಾರದೊಂದಿಗೆ ರಾಜಿ ಇಲ್ಲ