ಬಿ.ಎಲ್. ಸಂತೋಷ ಯೋಗ್ಯತೆ ಜನರಿಗೆ ತಿಳಿದಿದೆ

0
106

ಗದಗ: ಬಿಜೆಪಿಯಿಂದ ಓರ್ವ ಶಾಸಕ ಕಾಂಗ್ರೆಸ್‌ಗೆ ಹೋದರೆ ಬದಲಾಗಿ ಕಾಂಗ್ರೆಸ್ಸಿನಿಂದ ೪೦ ಜನರನ್ನು ತರುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಯೋಗ್ಯತೆ ಏನು ಎಂಬುದಕ್ಕೆ ರಾಜ್ಯದ ಮತದಾರರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ಸಿನಿಂದ ಬಿಜೆಪಿಗೆ ಒಬ್ಬನೇ ಒಬ್ಬ ಶಾಸಕನೂ ಕೂಡಾ ಹೋಗುವದಿಲ್ಲ. ಕಾಂಗ್ರೆಸ್ಸಿನಿಂದ ೪೦ರಿಂದ ೫೦ ಜನ ಶಾಸಕರು ಬಿಜೆಪಿಗೆ ಬರಲಿದ್ದಾರೆಂಬ ಹೇಳಿಕೆಯೇ ಹಾಸ್ಯಾಸ್ಪದ. ಕಾಂಗ್ರೆಸ್ ಪಕ್ಷದಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿದರು.

Previous articleಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ
Next articleಸೆ. 4ರಿಂದ ಹಾವೇರಿ ಜಿಲ್ಲೆಯಲ್ಲಿ ಮೋಡಬಿತ್ತನೆ