ಬಿಜೆಪಿ ಹೇಳುವುದನ್ನೇ ನೀವೂ ಯಾಕೆ ಹೇಳುತ್ತೀರಿ: ಪತ್ರಕರ್ತರಿಗೆ ರಾಹುಲ್‌ ಪ್ರಶ್ನೆ

0
12
rahul

“ಬಿಜೆಪಿ ಹೇಳುವುದನ್ನೇ ನೀವೂ ಯಾಕೆ ಯಾವಾಗಲೂ ಹೇಳುತ್ತೀರಿ” ರಾಹುಲ್‌ ಗಾಂಧಿ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ, ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ನೀವು ಯಾವಾಗಲೂ ಬಿಜೆಪಿ ಹೇಳುವುದನ್ನು ಏಕೆ ಹೇಳುತ್ತೀರಿ? ಪ್ರತಿ ಬಾರಿ ಬಿಜೆಪಿ ಹೇಳುವುದನ್ನು ನೀವು ಹೇಳುತ್ತೀರಿ” ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಒಂದು ಸರಳವಾದ ವಿಷಯವಿದೆ. ಅದಾನಿ ಜೀ ಅವರ ಶೆಲ್ ಕಂಪನಿಗಳಲ್ಲಿ 20,000 ಕೋಟಿ ರೂ.ಗಳನ್ನು ಯಾರು ಹೊಂದಿದ್ದಾರೆ? ಅದು ‘ಬೇನಾಮಿ’. ಆ ದುಡ್ಡು ಯಾರದ್ದು?” ಎಂದು ರಾಹುಲ್ ಗಾಂಧಿ ಮತ್ತೆ ಕೇಂದ್ರದ ವಿರುದ್ಧ ತಮ್ಮ ಆರೋಪಗಳನ್ನು ಪುನರುಚ್ಚರಿಸಿದರು.

Previous articleಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ
Next articleದಾಖಲೆ ಇಲ್ಲದ 40 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ