ಬಿಜೆಪಿ ಭದ್ರಕೋಟೆಯಲ್ಲಿ ಗೆದ್ದ ಪೈಲ್ವಾನ್ ಪಠಾಣ

0
36

ಹಾವೇರಿ: ಶಿಗ್ಗಾವಿಯಲ್ಲಿ ಯಾಸೀರ್ ಖಾನ್ ಪಠಾಣ್ ಬಿಜೆಪಿಯ ಭರತ್ ಬೊಮ್ಮಾಯಿ ವಿರುದ್ಧ ಭರ್ಜರಿ ಜಯಗಳಿಸಿದ್ದಾರೆ.
ಆರಂಭಿಕ ಹಂತದಿಂದಲೂ ಎನ್‌ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರು ಸಹ ಮಧ್ಯದಲ್ಲಿ ಟಫ್‌ ಫೈಟ್ ನೀಡಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಾ ಸಾಗಿ, ಅಂತಿಮವಾಗಿ ಪೈಲ್ವಾನ್ ಪಠಾಣ್ ಗೆಲುವು ಕಂಡಿದ್ದಾರೆ. ಬಿಜೆಪಿ ವಿರುದ್ಧ ನಿರಂತರವಾಗಿ ಸೋಲುಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರು ಮರಳಿ ಯತ್ನ ಮಾಡಿದ್ದರ ಫಲವಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಕಳೆದ ಬಾರಿ ಅಪ್ಪ ಬಸವರಾಜ ಬೊಮ್ಮಾಯಿ ವಿರುದ್ಧ ಸೋತು, ಇದೀಗ ಪುತ್ರನ ವಿರುದ್ಧ ಯಾಸೀರ್ ಖಾನ್ ಪಠಾಣ್ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಭದ್ರಕೋಟೆ ಕಾಂಗ್ರೆಸ್‌ ಪಾಲಾಗಿದೆ.

Previous articleಸಿದ್ದರಾಮಯ್ಯನವರ ದಕ್ಷ ಆಡಳಿತಕ್ಕೆ ಸಿಕ್ಕ ಜಯ
Next articleಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು