ಬಾಗಿನ ಅರ್ಪಣೆ: ಶಾಸಕ-ಅಧಿಕಾರಿಗಳ ಮಧ್ಯೆ ವಾಗ್ವಾದ

0
30

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಪ್ರವೇಶ ಕಲ್ಪಿಸುವ ವಿಚಾರವಾಗಿ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು.
ಹೊಸಪೇಟೆ ಸಮೀಪದ ಟಿಬಿ ಡ್ಯಾಂಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದು, ೧೦ಕ್ಕೂ ಹೆಚ್ಚು ವಾಹನಗಳಲ್ಲಿ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಪೊಲೀಸರು ಮೇನ್ ಗೇಟ್‌ ಬಳಿ ತಡೆದರು.
ನಿಮ್ಮ ವಾಹನ ಸೇರಿ ಮೂರು ವಾಹನಗಳನ್ನು ಮಾತ್ರ ಬಿಡುತ್ತೇವೆ. ಭದ್ರತೆಯಿಂದ ದೃಷ್ಟಿಯಿಂದ ಬೆಂಬಲಿಗರ ವಾಹನ ಬಿಡಲು ಸಾಧ್ಯವಿಲ್ಲಾ ಎಂಬ ಪೊಲೀಸರ ಹೇಳಿಕೆಗೆ ಶಾಸಕರು ಗರಂ ಆದರು.
ಬಿಟ್ರೆ ಎಲ್ಲರನ್ನು ಬಿಡಿ. ಇಲ್ಲ ನಾನು ವಾಪಾಸ್ ಹೋಗ್ತೆನೆ ಎಂದು ಶಾಸಕರು ವಾಪಾಸ್ಸಾದರು.

Previous articleಎಷ್ಟು ಎಕರೆಗೆ ನೀರಾವರಿ? ಲೆಕ್ಕಕ್ಕೆ ಪರದಾಡಿದ ಸಿಎಂ
Next articleತಿರುಪತಿ ಲಡ್ಡು ವಿವಾದ: ತಪ್ಪಿತಸ್ಥರನ್ನು ದೇಶದಿಂದ ಗಡಿಪಾರು ಮಾಡಿ