ಪ್ರಿಯಾಂಕ್ ಖರ್ಗೆ ಕ್ಷುಲ್ಲಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮ; ಸಚಿವ ಬಿ.ಸಿ. ಪಾಟೀಲ್ ತರಾಟೆ

0
49
ಬಿ.ಸಿ. ಪಾಟೀಲ್

ಧಾರವಾಡ: ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕ್ಷುಲ್ಲಕ ಹೇಳಿಕೆ ನೀಡಿ ಪ್ರಚಾರ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದು, ಶ್ರೀಮಂತರ ಜೀವನ ನಡೆಸುತ್ತಿರುವ ಪ್ರಿಯಾಂಕ್‌ಗೆ ಬಡವರ ಕಷ್ಟ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ 5000 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು, ಕಮೀಶನ್ ಹೊಡೆಯಲು ಬಿಜೆಪಿಯವರು ಜೊಲ್ಲು ಸುರಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಹಿಂದೊಮ್ಮೆ ಅವರು ಮಹಿಳೆಯೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅವರಿಗೆ ರೈತರ ನೋವು ಗೊತ್ತಿಲ್ಲ. ವಾಸ್ತವಾಂಶದ ಅರಿವಿಲ್ಲ. ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪ್ರಿಯಾಂಕ್ ಖರ್ಗೆ ಅವರು ಜೊಲ್ಲು ಸುರಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅದಕ್ಕಾಗಿಯೇ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

Previous articleಡಿಕೆಶಿ ಹೇಳಿಕೆಗೆ ಮಾಜಿ ಸಚಿವ ರಾಯರೆಡ್ಡಿ ಸಮರ್ಥನೆ
Next articleಪಂಚಮಸಾಲಿ ಮೀಸಲಾತಿ: ಸಿಎಂ ನಿವಾಸ ಎದುರು ಸತ್ಯಾಗ್ರಹದ ಎಚ್ಚರಿಕೆ