ಪೊಲೀಸರು ದಿಢೀರ್ ದಾಳಿ: ಅಕ್ರಮ ಮಧ್ಯ ಮಾರಾಟ: ಬಂಧನ

0
15

ಕುಷ್ಟಗಿ:ತಾಲೂಕಿನಲ್ಲಿ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ ಸಹ ಮಧ್ಯ ಮಾರಾಟ ಎಗ್ಗಿಲ್ಲದೆ ಸಾಗಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸನ್ನದ್ಧಗೊಂಡು. ಸಿ.ಪಿ.ಐ ನಿಂಗಪ್ಪ ರುದ್ರಪ್ಪಗೋಳ ಮಾರ್ಗದರ್ಶನದಂತೆ
೩ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿ ಅಕ್ರಮ ಮದ್ಯವಶ ಪಡಿಸಿಕೊಂಡ ಘಟನೆ ಜರುಗಿದೆ.

ಆರೋಪಿಯಿಂದ 90 ಎಂ.ಎಲ್.ನ 48 ಟೆಟ್ರಾಪಾಕ್ ಗಳ ಒಟ್ಟು 4.320 ಲೀಟರ್ ಮದ್ಯವಿದ್ದು,ಒಂದು ಟೆಟ್ರಾಪಾಕ್ ಗೆ 35.13 ರೂಗಳಂತೆ ಒಟ್ಟು 1686.24 ರೂಗಳು, ಮತ್ತು ಮದದ ಟೆಟ್ರಾ ಪಾಕೇಟಗಳನ್ನು ಮಾರಾಟ ಮಾಡಿದ ನಗದು ಹಣ 180 ರೂಗಳ ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮೌನೇಶ್ ರಾಠೋಡ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾವರಗೇರಾ ಠಾಣಾ ವ್ಯಾಪ್ತಿ: ತಾಲೂಕಿನ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವಂತಹ ಕೆ.ಹೊಸರು ಬಸ್ ನಿಲ್ದಾಣದ ಹತ್ತಿರ  ಮತಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ  ಎರಡು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪಿಎಸೈ  ತಿಮ್ಮಣ್ಣ ನಾಯಕ ಯಶಸ್ವಿಯಾಗಿದ್ದಾರೆ.

 ಆರೋಪಿಗಳಾದ ಬಾಷಾಸಾಬ ಟೆಂಗುಂಟಿ,ಶರೀಫ್ ಸಾಬ ವಾಲೇಕಾರ ಇವರಿಂದ 106  ಮದ್ಯದ ಪ್ಯಾಕೆಟ್  ಇವುಗಳ ಮೌಲ್ಯ 9540 ರೂ.ಹಾಗೂ 137 ಮದ್ಯದ ಪ್ಯಾಕೆಟ್ ಗಳ ಮೊತ್ತ 4812  ರೂ  ಮತ್ತು 550 ರೂಗಳ  ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹನಮಸಾಗರ ಠಾಣೆ:ತಾಲೂಕಿನ ಹಿರೇಗೊಣ್ಣಾರ  ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಸುನಿಲ್ ಅವರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳಾದ ಬಾಷಾಸಾಬ ನಧಾಫ್  ಈ ಆರೋಪಿಯಿಂದ 55 ಮದ್ಯದ  ಪ್ಯಾಕೆಟ್ ಇವುಗಳ ಮೌಲ್ಯ 1932 ರೂ ಮತ್ತು 300  ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೇ ರೀತಿಯಾಗಿ ಕಳಕಪ್ಪ ತಳವಾರ್ ಈ ಆರೋಪಿಯಿಂದ 45 ಮದ್ಯದ  ಪ್ಯಾಕೆಟ್ ನ ಮೊತ್ತ 1580 ರೂ ಹಾಗೂ 220   ನಗದು ವಶಪಡಿಸಿಕೊಂಡು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಅಂಕಲಗಿ ಅಡವಿ ಸಿದ್ದೇಶ್ವರ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ ವಿಧಿವಶ
Next articleಪಕ್ಷ ತೊರೆದಿದ್ದಕ್ಕಾಗಿ ಅಣಕು ಶವಯಾತ್ರೆ