ಮಂಗಳೂರು: ದೇಶದ ಜನರು ನಿದ್ದೆಯಲ್ಲಿರುವಾಗ ಭಾರತೀಯ ಸೇನೆ ತನ್ನ ಅದ್ಭುತ ಕಾರ್ಯಾಚರಣೆ ಮೂಲಕ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನುಗ್ಗಿ ಉಗ್ರ ತಾಣಗಳನ್ನು ಧ್ವಂಸ ಮಾಡಿ ತಕ್ಕ ಉತ್ತರವನ್ನು ನೀಡುವ ಮೂಲಕ ತನ್ನ ಶೌರ್ಯ ವನ್ನು ಜಗತ್ತಿಗೆ ಮತ್ತೆ ತೋರಿಸಿದೆ ಎಂದು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಶ್ಲಾಘಿಸಿದರು.
ಜಮ್ಮು ಕಾಶ್ಮೀರದಲ್ಲಿ 26 ಜನ ಪ್ರವಾಸಿಗರನ್ನು ಹಿಂದೂಗಳು ಎಂದು ಗುರುತಿಸಿ ಹತ್ಯೆಗೈದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ಪೈಶಾಚಿಕ ಕೃತ್ಯದ ಬಳಿಕ ಭಾರತೀಯರ ರಕ್ತ ಕುದಿಯುತ್ತಿತ್ತು. ಪ್ರತಿಯೊಬ್ಬರ ಮನದಲ್ಲಿ ಪ್ರತೀಕಾರದ ಜ್ವಾಲೆ ಉರಿಯುತ್ತಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಉಗ್ರರು ಮತ್ತು ಇದರ ಹಿಂದೆ ಇರುವವರು ಊಹೆ ಮಾಡದ ರೀತಿಯ ಶಿಕ್ಷೆ ಅನುಭವಹಿಸಲಿದ್ದಾರೆ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದರು. ಅಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ಇದನ್ನು ನಿಜ ಗೊಳಿಸಿದೆ. ಉಗ್ರರ ಹುಟ್ಟಡಗಿಸುವ ರೀತಿಯಲ್ಲಿ ಸೇನೆ ಬಲವಾದ ಪೆಟ್ಟು ನೀಡಿದೆ ಎಂದು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ತಿಳಿಸಿದ್ದಾರೆ.
ಭಯೋತ್ಪಾದಕರಿಗೆ ಸರಿಯಾದ ರೀತಿಯಲ್ಲಿ ಮರ್ಮಾಘಾತವನ್ನು ನೀಡಿರುವ ಭಾರತೀಯ ಸೇನೆಗೆ, ಪ್ರಧಾನ ಮಂತ್ರಿಗಳಿಗೆ, ರಕ್ಷಣಾ ಮಂತ್ರಿಗಳಿಗೆ, ರಕ್ಷಣಾ ಇಲಾಖೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಭಿನಂದನೆ ಗಳನ್ನು ಪತ್ರಿಕಾ ಹೇಳಿಕೆ ಮೂಲಕ ಕುಂಪಲ ರವರು ತಿಳಿಸಿದ್ದಾರೆ.