ನೇಹಾ ಪ್ರಕರಣ: ಸಿಎಂ ಸಾಂತ್ವನದ ಡ್ರಾಮಾ

0
11

ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯವಾಗಿ ಆಗುತ್ತಿರುವ ನಷ್ಟ ತುಂಬಿಕೊಳ್ಳಲು ಹಾಗೂ ಸರ್ಕಾರದ ನಡೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರರು ತಿರುಗಿ ಬೀಳುವ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನದ ನಾಟಕವಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಬುಧವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ನಡೆದು ನಾಲ್ಕಾರು ದಿನಗಳ ಬಳಿಕ ಕಾಂಗ್ರೆಸ್ ಸಿಂಪತಿ ತೋರುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಘಟನೆ ನಡೆದ ದಿನವೇ ನೇರವಾಗಿ ಕಾರ್ಪೋರೇಟರ್ ನಿರಂಜನ್ ಅವರಿಗೆ ಕರೆ ಮಾಡಿ ಅವರ ಧಾಟಿ, ಭಾಷೆಯಲ್ಲೇ ಸಾಂತ್ವನ, ಧೈರ್ಯ ನೀಡಿರುತ್ತಿದ್ದರು ಎಂದು ಹೇಳಿದರು.
ನೇಹಾ ಮನೆಗೆ ಸಚಿವ ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದಾಗಲೇ ಸಿಎಂ ಫೋನ್‌ನಲ್ಲಿ ಮಾತನಾಡಬಹುದಿತ್ತು ಎಂದರು.

Previous articleನೇಹಾ ಹತ್ಯೆ: ಸ್ಥಳ ಮಹಜರು ವೇಳೆ ಎಬಿವಿಪಿ ಪ್ರತಿಭಟನೆ
Next articleಮಾಲಿಕನ ಸಮಾಧಿ ಮೇಲೆ ರೋಧಿಸಿದ ಸಾಕುನಾಯಿ