ನಾನು ನಿಮ್ಮ ಮಾತನ್ನು ಕೇಳಲು ಬಯಸುತ್ತೇನೆ

0
13

ಲಡಾಖ್‌: ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ, ಅವರು ಕಳೆದ ವಾರದಿಂದ ಲಡಾಖ್‌ನ ಕಾರ್ಗಿಲ್‌ನಲ್ಲಿ ಪ್ರವಾಸದಲ್ಲಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಒಂದನ್ನು ಮಾಡಿದ್ದು ತಮ್ಮ ಸಂದೇಶದಲ್ಲಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಕೆಲ ನಾಯಕರು ತಮ್ಮ ಮನಸ್ಸಿನ ಮಾತು ಹೇಳುವದರಲ್ಲಿ ನಿರತರಾಗಿದ್ದಾರೆ. ನಾನು ನಿಮ್ಮ ಮನಸ್ಸಿನ ಮಾತು ಕೇಳಲು ಬಯಸುತ್ತೇನೆ, “ಲಡಾಖ್ ಒಂದು ಆಯಕಟ್ಟಿನ ಸ್ಥಳ. ಒಂದು ವಿಷಯ ಸ್ಪಷ್ಟವಾಗಿದೆ ಚೀನಾ ಭಾರತದ ಭೂಮಿಯನ್ನು ಕಸಿದುಕೊಂಡಿದೆ. ಲಡಾಖ್‌ನ ಒಂದು ಇಂಚು ಕೂಡ ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಸುಳ್ಳು ಹೇಳಿರುವುದು ಬೇಸರದ ಸಂಗತಿ. ಇದು ಲಡಾಖ್‌ನ ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿದೆ. ಲಡಾಖ್‌ನ ಪ್ರಮುಖ ಸಮಸ್ಯೆಗಳೆಂದರೆ – ಇಲ್ಲಿನ ಜನರ ರಾಜಕೀಯ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಉದ್ಯೋಗಕ್ಕಾಗಿ ಸರ್ಕಾರದ ಎಲ್ಲಾ ಭರವಸೆಗಳು ಸುಳ್ಳಾಗಿವೆ ಮತ್ತು ಮೊಬೈಲ್ ನೆಟ್‌ವರ್ಕ್ ಮತ್ತು ಏರ್ ಸೌಲಭ್ಯದ ಕೊರತೆ. ಮುಂದಿನ ಸದನದಲ್ಲಿ ಈ ಎಲ್ಲ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ! ಎಂದ ಅವರು ಲಡಾಖ್ ಜನರ್ ಈ ಸ್ವಾಗತ ಮತ್ತು ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದಿದ್ದಾರೆ.

Previous articleಬರೀ ಅಂಬಾನಿ – ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ
Next articleಪುರುಷರಲ್ಲಿ ಬಾಗಲಕೋಟ ತಂಡ ಮಹಿಳೆಯರಲ್ಲಿ ಕಲಬುರಗಿ ತಂಡ ಟೇಬಲ್ ಟೆನ್ನಿಸ್ ಚಾಂಪಿಯನ್