ನಮ್ಮ ಪ್ರಣಾಳಿಕೆಯನ್ನು ಎರಡೂ ಪಕ್ಷದವರು ಕಾಪಿ ಮಾಡಿದ್ದಾರೆ

0
206

ಬಳ್ಳಾರಿ: ಡುಪ್ಲಿಕೇಟ್ ನಂಬ ಬೇಡಿ ಒರಿಜಿನಲ್ ನಂಬಿ, ನಾವು ನೀಡಿದ ಪ್ರಣಾಳಿಕೆಯನ್ನು ಕಾಂಗ್ರೆಸ್‌ನವರು ಕಾಪಿ ಮಾಡಿದ್ದಾರೆ ಎಂದು ಆಪ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷದಿಂದ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೊಡುಗೆ ನೀಡುತ್ತಾ ಬಂದಿದ್ದಾರೆ. ನಮ್ಮ ಕ್ಲಿನಿಕ್, ಉಚಿತ ವಿದ್ಯುತ್ ಸೇರಿದಂತೆ ಹಲವು ವಿಷಯಗಳನ್ನು ಬಿಜೆಪಿ, ಕಾಂಗ್ರೆಸ್ ಕಾಪಿ ಮಾಡಿವೆ ಎಂದರು.
ಇನ್ನು ಮೀಸಲಾತಿ ವಿಷಯದಲ್ಲಿ ಮೂರು ಪಕ್ಷದವರು ತಪ್ಪು ಮಾಡಿದರು. ಹಾಲಿ ಇರುವ ಪರ್ಸಂಟೇಜ್ ಲೆಕ್ಕದಲ್ಲಿ ನೋಡಿದರೆ ನಾವು 200 ಕೋಟಿ ಜನಸಂಖ್ಯೆಯ ನಮ್ಮ ದೇಶದ್ದು ಆಗಲಿದೆ ಎಂದು ಅವರು ಲೇವಡಿ ಮಾಡಿದರು.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಾಂತರಾಜ್ ಅವರ ಆಯೋಗ ಜಾತಿ ಗಣತಿ ಮಾಡಿತು. ಆದರೆ ಅದರ ವರದಿಯನ್ನು ಸರ್ಕಾರ ಒಪ್ಪಲಿಲ್ಲ. ಒಂದು ವೇಳೆ ಒಪ್ಪಿ ಮೀಸಲಾತಿ ವಿಂಗಡಿಸಿದ್ದರೆ ಇಡೀ ದೇಶದಲ್ಲಿಯೇ ಇದೊಂದು ವೈಜ್ಞಾನಿಕ ಮೀಸಲಾತಿ ಆಗಿರುತ್ತಿತ್ತು ಎಂದು ಅವರು ತಿಳಿಸಿದರು. ಪಕ್ಷದ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ದೊಡ್ಡ ಕೇಶವ ರೆಡ್ಡಿ, ಡಿ.ರುದ್ರಯ್ಯ, ಕಿರಣಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Previous articleನಾಳೆಯಿಂದ ರಾಜ್ಯದ ಹಿರಿಯ ನಾಗರಿಕರ ಮತದಾನ
Next articleಸೋನಿಯಾ ಗಾಂಧಿ ವಿಷಕನ್ಯೆನಾ?’ ಯತ್ನಾಳ್ ಪ್ರಶ್ನೆ