ನಮ್ಮದು ಜನಕಲ್ಯಾಣ ಕೇಂದ್ರಿತ ಪ್ರಣಾಳಿಕೆ: ಸಿಎಂ

0
107
CM

ಹುಬ್ಬಳ್ಳಿ : ರಾಜ್ಯದ ಜನರ ಕಲ್ಯಾಣಕ್ಕೆ ಪೂರಕವಾದ ಅಂಶಗಳನ್ನು ನಮ್ಮ ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ. ಈ ಬಾರಿ ರಾಜ್ಯದ ಜನ ಇನ್ನಷ್ಟು ನಿರೀಕ್ಷೆ ಸಹಜವಾಗಿ ಇಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಗೂ ಮೀರಿ ಕೆಲಸ ಮಾಡುವ ಬದ್ಧತೆ ನಮ್ಮಲ್ಲಿದೆ. ಹೀಗಾಗಿ, ರಾಜ್ಯದ ಜನಕಲ್ಯಾಣಕ್ಕೆ ಪೂರಕವಾಗಿ ಪ್ರಣಾಳಿಕೆ ರೂಪಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ರಾಜ್ಯದ ಜನರಿಗೆ ಪ್ರಣಾಳಿಕೆ ಅಂಶಗಳು ತಲುಪಲಿವೆ ಎಂದರು.

Previous articleಮೋದಿಯತ್ತ ಮೊಬೈಲ್‌ ಎಸೆದ ಅಭಿಮಾನಿ
Next articleಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ