ನದಿ ಸ್ನಾನದ ವೇಳೆ ೪೩ ಬಲಿ

0
37

ಪಟನಾ: ಬಿಹಾರದಲ್ಲಿ ಬುಧವಾರ ಆಚರಿಸಲ್ಪಟ್ಟ ಜೀವಿತ್‌ಪುತ್ರಿಕ ಹಬ್ಬದ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಸಂಭವಿಸಿದ ಘಟನೆಗಳಲ್ಲಿ ೩೭ ಮಕ್ಕಳು ಸೇರಿದಂತೆ ೪೩ ಜನ ಬಲಿಯಾಗಿದ್ದಾರೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಈ ಹಬ್ಬದ ನಿಮಿತ್ತ ನದಿ ಮತ್ತು ಕೊಳ್ಳಗಳಲ್ಲಿ ಸ್ನಾನಕ್ಕೆ ಇಳಿದಾಗ ಹದಿನೈದು ರಾಜ್ಯಗಳಲ್ಲಿ ಇಂಥ ಘಟನೆಗಳು ಸಂಭವಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಮೃತರ ಸಂಬಂಧಿಕರಿಗೆ ೪ ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾದ್ರಪದ ಕೃಷ್ಣ ಅಷ್ಟಮಿ ದಿನ ‘ಜೀವಿಪುತ್ರಿಕಾ’ ವ್ರತ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮಕ್ಕಳ ಯೋಗ ಕ್ಷೇಮಕ್ಕಾಗಿ, ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ.

Previous articleಬಿಸಿಯೂಟದಲ್ಲಿ ಹಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ
Next articleಕಾಂಗ್ರೆಸ್ ಭ್ರಷ್ಟಾಚಾರದ ಪೋಷಕತ್ವ ವಹಿಸಿದೆ ಎನ್ನಲು ಇದಕ್ಕಿಂತ ಪುರಾವೆ ಬೇಕೆ?