ಹುಬ್ಬಳ್ಳಿ: ನಟ್ಟು ಬೋಲ್ಟ್ ಸರಿ ಮಾಡ್ತೇನೆ ಅಂತ ಧಮ್ ಕೊಡೋದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಿಡಿಕಾರಿದರು.
ರವಿವಾರ ನಗರದಲ್ಲಿ ಮಾತನಾಡಿದ ಅವರು, ಸಿನಿಮಾ ಕಲಾವಿದರ ನಟ್ಟು ಬೋಲ್ಟ್ ಸರಿ ಮಾಡ್ತೇನೆ ಅನ್ನೋ ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟರು. ಪಾದಯಾತ್ರೆ ವೇಳೆ ಕಲಾವಿದರು ಬೆಂಬಲಿಸಿಲ್ಲ ಅನ್ನೋದನ್ನ ಒಪ್ಪೋಣ. ಹೋರಾಟಕ್ಕೆ ಬರಬೇಕೋ ಬೇಡವೋ ಅನ್ನೋದು ಅವರಿಗೆ ಬಿಟ್ಟ ವಿಚಾರ. ನಾವು ಅದನ್ನು ಹೇಳೋ ಅವಶ್ಯಕತೆ ಇಲ್ಲ. ಗೋಕಾಕ್ ವರದಿ ಜಾರಿ ಹೋರಾಟದ ಸಂದರ್ಭದಲ್ಲಿ ರಾಜಕುಮಾರ್ ಸ್ವಯಂಪ್ರೇರಿತರಾಗಿ ಧುಮುಕಿದ್ದರು. ಅವರೇ ಹೋರಾಟದ ನೇತೃತ್ವ ತೆಗೆದುಕೊಂಡಿದ್ದರು. ಕನ್ನಡ ಚಲನಚಿತ್ರ ರಂಗದ ಕಲಾವಿದರು ಇದರ ಬಗ್ಗೆ ವಿಚಾರ ಮಾಡಬೇಕು. ಅವರು ಹೊರಟಕ್ಕೆ ಬರದೇ ಇದ್ದಲ್ಲಿ ಜನರೇ ತೀರ್ಮಾನಿಸುತ್ತಾರೆ.ಕನ್ನಡ ಚಲನಚಿತ್ರ ಕಲಾವಿದರ ಬಗ್ಗೆ ಕನ್ನಡಿಗರೇ ತೀರ್ಮಾನ ಕೈಗೊಳ್ತಾರೆ. ಹೊರಾಟಕ್ಕೆ ಬನ್ನಿ ಅಂತ ಬೆದರಿಕೆ ಹಾಕೋದು ಸರಿಯಲ್ಲ ಈ ರೀತಿ ಹೇಳಿವುದರಲ್ಲಿ ಅರ್ಥವಿಲ್ಲ ಎಂದರು.