ಧಗಧಗನೆ ಹೊತ್ತಿ ಉರಿದ ಬೋಟ್‌ಗಳು!

0
20
ಬೋಟ್‌

ಮಂಗಳೂರು: ನಗರದ ಕಸಬಾ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೂರು ಬೋಟ್‌ಗಳು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಇಲ್ಲಿ ಮೂರು ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಈ ಪೈಕಿ ಎರಡು ಬೋಟ್‌ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೋಟ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸ್ಥಳೀಯರೊಬ್ಬರ ಮಾಹಿತಿ ಪ್ರಕಾರ ಡಿಯೂ ಡಮನ್‌ನಂತಹ ದ್ವೀಪ ಪ್ರದೇಶಕ್ಕೆ ಸರಕು ಸಾಮಾಗ್ರಿಗಳನ್ನು ಕೊಂಡೊಯ್ಯಲು ಈ ಬೋಟ್‌ಗಳನ್ನು ಬಳಸಲಾಗುತ್ತಿತ್ತು. ಸದ್ಯ ದುರಸ್ತಿಗಾಗಿ ನಿಲ್ಲಿಸಲಾಗಿತ್ತು ಎಂದಿದ್ದಾರೆ.
ಬೋಟ್‌ಗಳು ಬೆಂಕಿಗಾಹುತಿಯಾದ್ದರಿಂದ ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಬೋಟ್‌ಗಳಿಗೆ ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಬೋಟ್‌ಗಳು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದೆ.

Previous articleಪಂಚಮಸಾಲಿ ಎಂದು ನಮೂದಿಸಲು ಜನಜಾಗೃತಿ ಪ್ರವಾಸ: ವಚನಾನಂದ ಶ್ರೀ
Next articleಮೀಸಲಾತಿ ಹೆಚ್ಚಳ; ಮುಖ್ಯಮಂತ್ರಿಯಿಂದ ಸೂಕ್ತ ನಿರ್ಧಾರ: ಬಿಎಸ್‌ವೈ