ದೇಶದ ಕಾನೂನೇ ಸರಿಯಿಲ್ಲ: ಸಚಿವ ಮಂಕಾಳು ವೈದ್ಯ

0
17

ಕಾರವಾರ: ಈ ದೇಶದ‌ ಕಾನೂನೇ ಸರಿಯಿಲ್ಲ. ಆದ ಕಾರಣ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದವರ ವಿರುದ್ಧ ದೂರು ನೀಡಿದರೂ ಪೊಲೀಸರು ಕೂಡ ಕ್ರಮ ಕೈಗೊಳ್ಳಲಾಗದೆ ಅಸಹಾಯಕರಾಗಿದ್ದಾರೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಕೆಲಸ ಇಲ್ಲ. ಸಾಮಾಜಿಕ ಜಾಲಾತಾಣದಲ್ಲಿ ಕೆಟ್ಟದಾಗಿ ಟೀಕೆ ಮಾಡುತ್ತಾರೆ. ಅವರ ಮನಸ್ಥಿತಿಯೇ ಸರಿಯಿಲ್ಲ. ನಾನೇ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಐದು ಪ್ರಕರಣ ನೀಡಿದ್ದರು. ಯಾವುದು ಪ್ರಯೋಜನವಾಗಿಲ್ಲ.
ದೇಶ ಕಾನೂನು ತಂದಿದೆ. ಆದರೆ ಕೋರ್ಟ್ ಅದನ್ನು ತಡೆ ಹಿಡಿದಿದೆ. ಇದರಿಂದ ಪೊಲೀಸ್ ಇಲಾಖೆ‌ ಸಹ ಅಸಾಹಯಕವಾಗಿದೆ. ಆದರೆ ಹೊಸ ಕಾನೂನನ್ನು ತಂದು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಬಿಜೆಪಿಯವರು ಸುಳ್ಳು ಹೇಳೇ ರಾಜಕಾರಣ ಮಾಡುತ್ತಾರೆ. ಐದು ವರ್ಷ ರಾಜ್ಯದಲ್ಲಿ ಅಧಿಕಾದ ಕೊಟ್ರು, ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ಕೊಟ್ರು ಯಾವುದೇ ಆಭಿವೃದ್ಧಿ ಮಾಡಿಲ್ಲ. ಆದರೆ ಆಗಬಾರದನ್ನೆ ಹೆಚ್ಚಾಗಿ ಮಾಡಿದ್ದಾರೆ. ಬಿಜೆಪಿಗರಿಗೆ ರಾಜಕಾರಣವೇ ಮಾಡಲು ಬರುವುದಿಲ್ಲ. ಅವರಿಗೆ ವಿರೋಧ ಪಕ್ಷದ ನಾಯಕರನ್ನೂ ಮಾಡಲು ಸಾಧ್ಯವಾಗಿಲ್ಲ. ರಾಜ್ಯ ಕಳೆದುಕೊಂಡ ಮೇಲೆ ಇನ್ನೂ ಬಿಜೆಪಿಗರು ಒಂದಾಗಿಲ್ಲ ಎಂದರು.
ಕಾಂಗ್ರೆಸ್ ನಿಂದ ಬಂದವರಿಂದ ಶಿಸ್ತು ಹಾಳಾಗುತ್ತದೆ ಎಂದು ಈಗ ಬಿಜೆಪಿಗರು ಹೇಳುತ್ತಾರೆ. ಆದರೆ ಶಿಸ್ತು ಹೊಂದಿದ್ದ ಬಿಜೆಪಿಯವರು ಹದಿನಾಲ್ಕು ಜನ ಕಾಂಗ್ರೆಸ್ ಶಾಕರನ್ನು ಏಕೆ ತೆಗೆದುಕೊಂಡರು. ಕಾಂಗ್ರೆಸ್ ನಿಂದ ಹೋದವರು ಶಿಸ್ತು ತರಲು ಪ್ರಯತ್ನ ಮಾಡಿದರು. ಆದರೆ ಇದು ಆಗಲಿಲ್ಲ. ಅದಕ್ಕೆ ವಾಪಾಸ್ ಕಾಂಗ್ರೆಸ್ ನತ್ತ ಬರುತ್ತಿದ್ದಾರೆ ಎಂದರು

Previous articleವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ: ಪತ್ರಕ್ಕೆ ರಕ್ತ ಮುದ್ರೆ
Next articleʼಬೆಹತರ್‌ ಭಾರತ್‌ ಬುನಿಯಾದಿʼ ಉದ್ಘಾಟನೆಗೆ ಸಿಎಂ