`ದೇಶದಲ್ಲಿ ಕಾಂಗ್ರೆಸ್ ೫೦ ಸ್ಥಾನ ಕೂಡ ಗೆಲ್ಲಲ್ಲ’

0
16

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ನಾಲ್ಕನೂರಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಬಿಜೆಪಿ ಸಂಸದರು ಬೇಕೋ ಅಥವಾ ೫೦ ಸ್ಥಾನ ಗೆಲ್ಲುವಷ್ಟೂ ಗತಿಯಿಲ್ಲದ ಕಾಂಗ್ರೆಸ್ ಬೇಕೋ ಎನ್ನುವುದನ್ನು ಪ್ರಜ್ಞಾವಂತ ಮತದಾರರು ಚಿಂತನೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸೋಮವಾರ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರಂತಹ ಬಲಾಢ್ಯ ನಾಯಕತ್ವ ಒಂದು ಕಡೆಯಾದರೆ, ಮತ್ತೊಂದು ಕಡೆಗೆ ಕಾಂಗ್ರೆಸ್‌ನ ದುರ್ಬಲ ನಾಯಕತ್ವವಿದೆ. ಈ ಚುನಾವಣೆಯಲ್ಲಿ ಬಿಜೆಪಿ ನಾಲ್ಕನೂರಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Previous articleಅಭಿಮಾನಿಗಳಿಗೆ ಸುಮಲತಾ ಭಾವನಾತ್ಮಕ ಪೋಸ್ಟ್‌
Next articleನ್ಯೂಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಚನ್ನಪಟ್ಟಣ ಗೊಂಬೆಗಳ ಕೌದಿ ವಿನ್ಯಾಸ ಆಯ್ಕೆ