ಮೈಸೂರು: ದಸರಾ ಇನ್ನಷ್ಟು ನಾದಮಯವಾಗಲಿ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ, ಮೈಸೂರಿನ ದಸರಾ ಉತ್ಸವದ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ಅವರು ತಮ್ಮ ಸಂದೇಶದಲ್ಲಿ ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಖ್ಯಾತ ಸಂಗೀತ ನಿರ್ದೇಶಕರಾದ ನಾದ ಬ್ರಹ್ಮ ಶ್ರೀ ಹಂಸಲೇಖ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಬಾರಿಯ ದಸರಾ ಇನ್ನಷ್ಟು ನಾದಮಯವಾಗಲಿ, ಸಂಸ್ಕೃತಿಗಳ ಸಮಾಗಮವಾಗಲಿ ಎಂದಿದ್ದಾರೆ.
