ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್‌ ಹಬ್ಬ ಆಚರಣೆ

0
18

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಇಂದು ಸಂಭ್ರಮದ ಈದ್‌ ಉಲ್‌ ಫಿತ್ರ್‌ (ರಂಜಾನ್‌ ಹಬ್ಬ) ಆಚರಣೆ ಮಾಡಲಾಯಿತು. ಹಬ್ಬದ ನಿಮಿತ್ತ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ (ಚೆನ್ನಮ್ಮ) ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹೊಸ ಬಟ್ಟೆಗಳನ್ನು ತೊಟ್ಟು, ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಬೈಕ್‌, ಕಾರುಗಳಲ್ಲಿ ಆಗಮಿಸಿ ಮೈದಾನದಲ್ಲಿ ಮೊದಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಸುಖ ಶಾಂತಿ ನೀಡುವಂತೆ ಪ್ರಾರ್ಥಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.
ಈದ್ಗಾ ಮೈದಾನದಲ್ಲಿ ಸ್ಥಳದ ಕೊರತೆ ಹಿನ್ನೆಲೆಯಲ್ಲಿ ಲ್ಯಾಮಿಂಗ್ಟನ್ ರಸ್ತೆಯಲ್ಲೂ ವಿಶೇಷ ಪ್ರಾರ್ಥನೆ ನಡೆಯಿತು. ಈ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸಹ ಬಂದ್‌ ಮಾಡಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಾಡು ಮಾಡಿದ್ದರು.


ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮುಖಂಡರಾದ ಅಲ್ತಾಫ್ ಹಳ್ಳೂರ, ಶಿರಾಜ ಅಹ್ಮದ ಕುಡಚಿವಾಲೆ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಫಾರೂಕ ಅಬ್ಬೂನವರ, ಶಾಜಮಾನ ಮುಜಾಹಿದ, ವಾಜೀದ ಬಜೇರಿ, ರಾಜೇಸಾಬ ಸಿಕಂದರ, ಮೊಹ್ಮದ ಕೋಳೂರ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪರಸ್ಪರ ಶುಭ ಕೋರಿದರು. ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ರಜತ ಉಳ್ಳಾಗಡ್ಡಿಮಠ, ಶಂಕ್ರಣ್ಣ ಬಿಜವಾಡ, ಪ್ರಕಾಶ ಬುರಬುರೆ, ಪಾರಸಮಲ್ ಜೈನ ಸೇರಿದಂತೆ ಅನೇಕರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.

Previous articleಡಿ ಕೆ ಶಿವಕುಮಾರ್‌ಗೆ ಮಾತನಾಡಲು ವಿಷಯವಿಲ್ಲದೆ ಅನಗತ್ಯ ಆರೋಪ
Next articleಬಿಜೆಪಿ ಬಿಟ್ಟು ‘ಕೈ’ ಹಿಡಿದ ಮಾಜಿ ಶಾಸಕ ವಿಶ್ವನಾಥ ‌ಪಾಟೀಲ ಹೆಬ್ಬಾಳ