ಮಂಡ್ಯ: ಗೂಡ್ಸ್ ಆಟೋ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು 15 ಮಂದಿಗೆ ಗಾಯವಾದಂತ ಘಟನೆ ಕೆ.ಆರ್. ಪೇಟೆಯಲ್ಲಿ ನಡೆದಿದೆ.
ಕೆ.ಆರ್. ಪೇಟೆಯ ಉರುಳಿ ಗಂಗನಹಳ್ಳಿ ಗ್ರಾಮದ 18ಕ್ಕೂ ಹೆಚ್ಚು ಜನ ಮಂಗಳವಾರ ಗೂಡ್ಸ್ ಆಟೋದಲ್ಲಿ ಹುಬ್ಬನಹಳ್ಳಿ ಗ್ರಾಮದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನದ ಬಳಿಕ ವಾಪಸ್ ಗ್ರಾಮಕ್ಕೆ ಮರುಳುವಾಗ ಈ ಅಪಘಾತ ಸಂಭವಿಸಿದೆ. ಗೂಡ್ಸ್ ಆಟೋ ವೇಗವಾಗಿ ಬಂದ ಪರಿಣಾಮ ತಿರುವಿನಲ್ಲಿ ಪಲ್ಟಿಯಾಗಿದೆ. ಈ ವೇಳೆ ಅತಿಯಾಗಿ ರಕ್ತಸ್ರಾವದಿಂದ 40ವರ್ಷದ ಅಂಬುಜ ಹಾಗೂ ಪ್ರತಾಪ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಕೆ.ಆರ್. ಪೇಟೆಯ ಟೌನ್ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.