ಭಾರತ್ ಜೋಡೋ ಯಾತ್ರೆ ಮಾಡಿದರೆ ತಮ್ಮ ಸರ್ಕಾರ ಬರುತ್ತೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್‌ನವರಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತವನ್ನು ಹಿಂದೆ ತುಂಡು ಮಾಡಿದ್ಯಾರು?. ಇವತ್ತು ಭಾರತವನ್ನು ಜೋಡಿಸಬೇಕು ಅಂತ ಹೊರಟಿದ್ದಾರೆ. ಇದು ಸಾಧ್ಯನಾ ಎಂದು ಪ್ರಶ್ನಿಸಿದರು. ಭಾರತ್ ಜೋಡೋ ಅಂದ್ರೆ ರಾಹುಲ್ ಗಾಂಧಿ ಭಾರತ ಕಟ್ಟೋದಲ್ಲ, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಒಂದು ಮಾಡುವಂತಹ ಯಾತ್ರೆಯಾಗಿದೆ ಎಂದರು.


























